ಕಾಡುತುರುತಿ ಶಿವ ದೇವಸ್ಥಾನವು ಥಾಲಿ ದೇವಸ್ಥಾನ ಎಂದೇ ಪ್ರಸಿದ್ಧ. ಕೇರಳದ ಜನಪ್ರಿಯ ಮೂರು ಶಿವ ದೇವಸ್ಥಾನಗಳಲ್ಲಿ ಇದೂ ಒಂದು. ಇದು ಪ್ರಮುಖ ಪ್ರವಾಸಿ ತಾಣ. ವೆಂಬನಾಡ್ ಕೆರೆಯ ಎದುರು ಸಣ್ಣ ಗುಡ್ಡದಲ್ಲಿ ಈ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿರುವ ಶಿವನ ಮೂರ್ತಿಯನ್ನು ಸ್ಥಾಪಿಸಿದ್ದು ಖರಾರಾಸುರ ಎಂಬ ಪ್ರತೀತಿಯಿದೆ. ಐತಿಹ್ಯಗಳ ಪ್ರಕಾರ ರಾಕ್ಷಸರು ನಿರ್ಮಿಸಿದ ಮೂರು ದೇವಸ್ಥಾನಗಳಲ್ಲಿ ಇದೂ ಒಂದು. ಇನ್ನೆರಡು ದೇವಸ್ಥಾನಗಳು ವೈಕಾಮ್ ಮತ್ತು ಎತ್ತುಮನೂರಿನಲ್ಲಿವೆ.
ಶಿವನ ಕಥೆಯನ್ನು ಇಲ್ಲಿ ಮರದ ಕೆತ್ತನೆಯ ಮೂಲಕ ಹೇಳಲಾಗಿದೆ. ಕಾರ್ತವೀರಾರ್ಜುನೀಯಮ್ ಕಥೆಯನ್ನು ಇಲ್ಲಿ ಕೆತ್ತಲಾಗಿದೆ. ಇದು ಕೇರಳದ ಮಧ್ಯಕಾಲೀನ ವಾಸ್ತುಶಿಲ್ಪವನ್ನು ಹೇಳುತ್ತದೆ. ಸಮೀಪದ ಕೆರೆಗೆ ಪ್ರವಾಸ ಮಾಡಿ ಪ್ರವಾಸಿಗರು ಖುಷಿಪಡಬಹುದು. ಈ ದೇವಸ್ಥಾನದ ಆವರಣದಲ್ಲೇ ಗಣಪತಿ, ದುರ್ಗೆ ಮತ್ತು ಸಸ್ತಾ ದೇವತೆಯ ಮೂರ್ತಿಯನ್ನೂ ಸ್ಥಾಪಿಸಲಾಗಿದೆ.


Click it and Unblock the Notifications