ಗೋವಾದ ಪಾರ್ಟಿ ಕಳೆಗಿಂತ ಭಿನ್ನವಾಗಿದ್ದು ಧಾರ್ಮಿಕ ಮನೋಭಾವನೆಯನ್ನು ಉಕ್ಕಿಸುವಂತಹ ಆಕರ್ಷಕ ಸ್ಥಳ ಚೊಪಡೆಮ್. ಇದು ಚರ್ಪೋರಾ ನದಿಯ ಉತ್ತರ ದಡದಲ್ಲಿದೆ. ಧಾರ್ಮಿಕ ಇತಿಹಾಸ ಇಷ್ಟಪಡುವ ಯಾತ್ರಿಕರು ಅಥವಾ ಪ್ರವಾಸಿಗರು ಇಲ್ಲಿರುವ ಭೂಮಿಕಾ, ವೇತಾಲ್, ಗಾರುಡಿ ಮತ್ತು ರಾಮಪುರುಷನಂತಹ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಈ ದೇವಸ್ಥಾನಗಳು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿವೆ.
ತಂಗಲು ಈ ಪ್ರದೇಶದ ಸುತ್ತಮುತ್ತ ಕೆಲವು ಅತಿಥಿಗೃಹಗಳು ಇದ್ದರೂ ಕೂಡ ಸುಲಭವಾಗಿ ದೊರಕುವುದು ಕಷ್ಟವೆಂದೆ ಹೇಳಬಹುದು. ಇಲ್ಲಿಯ ಅತಿಥಿಗೃಹಗಳ ಸೇವೆಯ ಗುಣಮಟ್ಟವು ಉತ್ತಮವಾದುದಾಗಿದೆ. ಈ ಪ್ರದೇಶದಿಂದ ಸ್ವಲ್ಪ ಮುಂದೆ ಸಾಗಿದರೆ ಹೋಟೆಲ್ ಮತ್ತು ರಿಸಾರ್ಟ್ ಗಳೂ ದೊರೆಯುತ್ತವೆ.
ಸಿಯೋಲಿಮ್ ನಿಂದ ಫೆರ್ರಿಯ ಮುಖಾಂತರ ಚೊಪಡೆಮ್ ಗೆ ತಲುಪಬಹುದಾಗಿದೆ. ಈ ಪ್ರಯಾಣವು ಸಾಹಸಭರಿತ ಮನೋರಂಜನೆಯನ್ನು ಒದಗಿಸುತ್ತದೆ. ರಸ್ತೆಯ ಮೂಲಕವು ಚೊಪಡೆಮ್ ಗೆ ತಲುಪಬಹುದಾಗಿದ್ದು, ಪ್ರಯಾಣಾವಧಿಯು ಸ್ವಲ್ಪ ದೀರ್ಘವಾಗಿರುತ್ತದೆ. ಮುಂಬೈ ಅಥವಾ ಪುಣೆಯಿಂದ ಗೋವಾಗೆ ಬರುವಾಗ ಉತ್ತರ ಭಾಗದ ಗೋವಾ ತಲುಪುವ ಮುನ್ನ ಎದುರಾಗುವ ಮೊದಲ ಪ್ರದೇಶವೆ ಚೊಪಡೆಮ್.


Click it and Unblock the Notifications