ಬಸ್ಸಿ ವನ್ಯಧಾಮವು ಬಸ್ಸಿ ಹಳ್ಳಿಯ ಸಮೀಪದಲ್ಲಿದೆ. ಇದು ಸುಮಾರು 50 ಚದರ ಕಿ.ಮೀ ವ್ಯಾಪ್ತಿಯಲ್ಲಿದೆ. ಪಶ್ಚಿಮದಲ್ಲಿ ವಿಂದ್ಯಾಚಲ ಪರ್ವತ ಶ್ರೇಣಿಯಿದೆ. ಈ ಪ್ರದೇಶದ ಸೌಂದರ್ಯವು ನಿಸರ್ಗ ಪ್ರಿಯರಿಗೆ ಇಷ್ಟವಾಗುತ್ತದೆ. ಈ ಪ್ರದೇಶವು ಚಿರತೆ, ನವಿಲು, ಮುಂಗುಸಿ ಮತ್ತು ಜಿಂಕೆಗಳಿಂದ ಕೂಡಿದ್ದು, ವನ್ಯಜೀವಿ ಪ್ರಿಯರು ಭೇಟಿ ಮಾಡಲೇಬೇಕಾದ ಸ್ಥಳ. ಈ ವನ್ಯಧಾಮವು ಹಲವು ವಲಸೆ ಹಕ್ಕಿಗಳನ್ನೂ ಆಕರ್ಷಿಸುತ್ತದೆ. ವನ್ಯಧಾಮದ ಸಮೀಪದಲ್ಲಿರುವ ಓರಯ್ ಡ್ಯಾಮ್ ಮತ್ತು ಬಸ್ಸಿ ಡ್ಯಾಮ್ ಕೂಡಾ ಪ್ರಮುಖ ಪ್ರವಾಸಿ ತಾಣ. ವನ್ಯಧಾಮಕ್ಕೆ ಭೇಟಿ ನೀಡಲು ಚಿತ್ತೋರಗಢದ ಜಿಲ್ಲಾ ಅರಣ್ಯಾಧಿಕಾರಿಯಿಂದ ಪರವಾನಗಿ ಪಡೆಯಬೇಕಾದದ್ದು ಅಗತ್ಯ.


Click it and Unblock the Notifications