Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿರಾಪುಂಜಿ » ಆಕರ್ಷಣೆಗಳು » ದೈನ್-ಥ್ಲೆನ್ ಜಲಪಾತ

ದೈನ್-ಥ್ಲೆನ್ ಜಲಪಾತ, ಚಿರಾಪುಂಜಿ

1

ದೈನ್-ಥ್ಲೆನ್ ಜಲಪಾತವು ಚಿರಾಪುಂಜಿಯಲ್ಲಿರುವ ಮತ್ತೊಂದು ಮಂತ್ರಮುಗ್ಧಗೊಳಿಸುವಂತ ಜಲಪಾತವಾಗಿದೆ. "ಥ್ಲೆನ್" ಎಂದರೆ ಹೆಬ್ಬಾವು ಎಂದರ್ಥ. ಈ ಜಲಪಾತಕ್ಕೆ ಈ ಪ್ರಾಂತ್ಯದ ಗುಹೆಗಳಲ್ಲಿ ಕಂಡುಬರುವ "ಥ್ಲೆನ್" ಅಂದರೆ ಹೆಬ್ಬಾವಿನಿಂದಾಗಿ ಈ ಹೆಸರು ಬಂದಿದೆ. ಸ್ಥಳೀಯ ನಂಬಿಕೆಗಳ ಪ್ರಕಾರ ಇಲ್ಲಿನ ಹಳ್ಳಿಯವರು ಈ ಹೆಬ್ಬಾವಿನ ಭೀತಿಯನ್ನು ಹೋಗಲಾಡಿಸಲು ಅದನ್ನು ಹಿಡಿದು, ಸಂಹರಿಸಿದರಂತೆ. ನಂತರ ಅವರು ಅದರ ಮಾಂಸವನ್ನು ಭಕ್ಷಿಸಿದರಂತೆ. ಈ ಹೆಬ್ಬಾವನ್ನು ಎಲ್ಲಿ ಸಂಹರಿಸಲಾಯಿತೊ, ಆ ಸ್ಥಳಕ್ಕೆ ಸಮೀಪದಲ್ಲಿ ದೈನ್-ಥ್ಲೆನ್ ಜಲಪಾತವಿತ್ತು. ಈ ದಂತ ಕತೆಯಿಂದಾಗಿ ಈ ಜಲಪಾತದ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು.

ಈಸುಂದರವಾದ ಜಲಪಾತವನ್ನು ನೋಡಲು ವಿಶ್ವದ ನಾನಾ ಮೂಲೆಗಳಿಂದ ಜನರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಈ ಜಲಪಾತಕ್ಕೆ ಸಮೀಪದಲ್ಲಿ ನೈಸರ್ಗಿಕವಾಗಿರುವ ಬಂಡೆಗಳ ಮೇಲೆ ಕೆತ್ತಲಾಗಿರುವ ಕೆತ್ತನೆಗಳಿಂದ ಥ್ಲೆನ್ ಮತ್ತು ಹಳ್ಳಿಯವರ ನಡುವಿನ ಸಮರದ ಚಿತ್ರಣವನ್ನು ನಾವು ಮನಗಾಣಬಹುದು. ಇಲ್ಲಿ ಥ್ಲೆನ್ ಭ್ರಷ್ಟಾಚಾರ, ಲೋಭ ಮತ್ತು ದುಷ್ಟತೆಯ ಸಂಕೇತವಾಗಿ ಚಿತ್ರಣಗೊಂಡಿದೆ.

ದೈನ್-ಥ್ಲೆನ್ ಚಿರಾಪುಂಜಿಯಿಂದ ಐದು ಕಿಲೋ ಮೀಟರ್ ದೂರದಲ್ಲಿ ನೆಲೆಗೊಂಡಿದೆ. ಶಿಲ್ಲಾಂಗ್‍ನಿಂದ ಕ್ಯಾಬ್ ಅಥವಾ ಬಸ್ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed