ಚೆನ್ನೈನ ಟ್ರಿಪ್ಲಿಕೇನ್ ನಲ್ಲಿರುವ ಪಾರ್ಥಸಾರಥಿ ದೇವಾಲಯವು ಕೃಷ್ಣ ದೇವರಿಗೆ ಮುಡಿಪಾದ ದೇವಸ್ಥಾನವಾಗಿದೆ. 8 ನೇಯ ಶತಮಾನದಲ್ಲಿ ನಿರ್ಮಿತವಾದುದೆಂದು ನಂಬಲಾಗಿರುವ ಈ ದೇವಾಲಯದ ಕುರಿತು ಅಳ್ವರ್ ಸಂತರು ತಮ್ಮ ಗ್ರಂಥಗಳಲ್ಲಿ ಅದ್ಭುತವಾಗಿ ವಿವರಿಸಿದ್ದಾರೆ.
ಮೂಲತಃ ಪಾರ್ಥಸಾರಥಿ ಎಂಬುದು ಸಂಸ್ಕೃತ ಶಬ್ದವಾಗಿದ್ದು, ಇದರ ಅರ್ಥ 'ಅರ್ಜುನನ ಸಾರಥಿ' ಎಂದಾಗುತ್ತದೆ. ಮಹಾಭಾರತ ಮಹಾಕಾವ್ಯದಲ್ಲಿ ಶ್ರೀಕೃಷ್ಣನು ಅರ್ಜುನನ ರಥದ ಸಾರಥಿಯಾಗಿ ಪಾತ್ರ ನಿರ್ವಹಿಸಿದ್ದನು. ಟ್ರಿಪ್ಲಿಕೇನ್ ನ ಈ ಕೃಷ್ಣನ ದೇವಾಲಯವನ್ನು ಒಂದನೇಯ ನರಸಿಂಹವರ್ಮನ್ನರ ಮುಂದಾಳತ್ವದಲ್ಲಿ ಕಾರ್ಯಾರಂಭಿಸಲಾಯಿತು. ಈ ದೇವಸ್ಥಾನದಲ್ಲಿ ಕೃಷ್ಣ, ನರಸಿಂಹ, ರಾಮ ಮತ್ತು ವರಾಹ ಹೀಗೆ ಹಲವು ವಿಷ್ಣುವಿನ ಅವತಾರಗಳನ್ನು ಇರಿಸಲಾಗಿದೆ. ರಾಮ ಹಾಗು ನರಸಿಂಹರ ಗುಡಿಗಳಿಗೆ ಪ್ರತ್ಯೇಕವಾದ ಪ್ರವೇಶ ದ್ವಾರಗಳಿರುವುದನ್ನು ಇಲ್ಲಿ ಕಾಣಬಹುದು.
ಈ ದೇವಾಲಯವು ಚೆನ್ನೈನ ಅತ್ಯಂತ ಪುರಾತನ ರಚನೆಯಾಗಿರುವುದರಿಂದ ಬಹು ಜನಪ್ರಿಯವಾಗಿದೆ. ಇದೆ ಕಾರಣದಿಂದ ಹಲವಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ದೇವಾಲಯದ ಖಂಬಗಳು ಹಾಗು ಗೋಪುರಗಳು ಕೂಡ ಆಕರ್ಷಣೀಯವಾದ ಸೂಕ್ಷ್ಮ ಕೆತ್ತನೆಯ ಕೆಲಸಗಳನ್ನು ಹೊಂದಿದ್ದು ಹೆಸರುವಾಸಿಯಾಗಿದೆ.


Click it and Unblock the Notifications