Search
  • Follow NativePlanet
Share
ಮುಖಪುಟ » ಸ್ಥಳಗಳು » ಚೆನ್ನೈ » ಆಕರ್ಷಣೆಗಳು » ಅಷ್ಟಲಕ್ಷ್ಮಿ ದೇವಾಲಯ

ಅಷ್ಟಲಕ್ಷ್ಮಿ ದೇವಾಲಯ, ಚೆನ್ನೈ

2

ಚೆನ್ನೈನಲ್ಲಿರುವ ಅಷ್ಟಲಕ್ಷ್ಮಿ ದೇವಾಲಯವು ಸಂಪತ್ತು ಮತ್ತು ಏಳಿಗೆಯ ಪ್ರತೀಕವಾದ ಲಕ್ಷ್ಮಿ ದೇವಿಯ, ಎಂಟು ರೂಪಗಳಾದ ಅಷ್ಟ ಲಕ್ಷ್ಮಿಯರಿಗೆ ಸಮರ್ಪಿತವಾಗಿದೆ. ಇವಳು ವಿಷ್ಣುವಿನ ಅರ್ಧಾಂಗಿಯೂ ಹೌದು. ಹಿಂದು ಪುರಾಣಗಳ ಪ್ರಕಾರ, ಲಕ್ಷ್ಮಿ ದೇವಿಯು ಮನುಷ್ಯನ ಜೀವನದಲ್ಲಿ ಆರೋಗ್ಯ, ಬುದ್ಧಿ, ಸಂತಾನ, ಶಕ್ತಿ ಮತ್ತು ಧೈರ್ಯ ಕರುಣಿಸುತ್ತಾಳೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಅಷ್ಟ ಲಕ್ಷ್ಮಿಯರನ್ನು ಒಟ್ಟಾಗಿ ಒಂದೆ ಸಮೂಹದಲ್ಲಿ ಪೂಜಿಸಲಾಗುತ್ತದೆ.

ನಾಲ್ಕು ಸ್ತರಗಳನ್ನು ಹೊಂದಿರುವ ಈ ದೇವಾಲಯವು ಚೆನ್ನೈನ ಬೆಸಂಟ್ ನಗರ ಬೀಚ್ ಸನಿಹದಲ್ಲಿ ನೆಲೆಸಿದೆ. ಎಂಟು ಲಕ್ಷ್ಮಿಯರ ವಿಗ್ರಹಗಳನ್ನು ಪ್ರತ್ಯೇಕವಾದ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಸಾಮಾನ್ಯವಾಗಿ ದೇವಾಲಯದಲ್ಲಿ ಪೂಜೆಯನ್ನು ವಿಷ್ಣು ಹಾಗು ಲಕ್ಷ್ಮಿ ನೆಲೆಸಿದ ಎರಡನೇಯ ಅಂತಸ್ತಿನಿಂದ ಪ್ರಾರಂಭಿಸಲಾಗುತ್ತದೆ. ದೇವಾಲಯದ ಮೂರನೇಯ ಸ್ತರದಲ್ಲಿ ಸಂತಾನ ಲಕ್ಷ್ಮಿ, ವಿಜಯ ಲಕ್ಷ್ಮಿ ಮತ್ತು ಗಜಲಕ್ಷ್ಮಿಯರ ವಿಗ್ರಹಗಳನ್ನು ಕಾಣಬಹುದಾಗಿದ್ದು, ನಾಲ್ಕನೇಯ ಮಹಡಿಯಲ್ಲಿ ಧನಲಕ್ಷ್ಮಿಯನ್ನು ನೋಡಬಹುದು. ಇನ್ನು ಮೊದಲನೇಯ ಮಹಡಿಯಲ್ಲಿ ಆದಿಲಕ್ಷ್ಮಿ, ಧೈರ್ಯಲಕ್ಷ್ಮಿ ಮತ್ತು ಧಾನ್ಯಲಕ್ಷ್ಮಿಯರ ದರ್ಶನ ಪಡೆಯಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed