Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂದೀಗಢ್ » ಆಕರ್ಷಣೆಗಳು » ಗುಪ್ತ ಕಣಿವೆ(ಹಿಡನ್ ವ್ಯಾಲಿ)

ಗುಪ್ತ ಕಣಿವೆ(ಹಿಡನ್ ವ್ಯಾಲಿ), ಚಂದೀಗಢ್

1

ಚಂದೀಗಢ್ ನ ವಾಯುವ್ಯದಲ್ಲಿ 8 ಕಿ.ಮೀ. ದೂರದಲ್ಲಿ ಶಿವಾಲಿಕ್ ತಪ್ಪಲಿನಲ್ಲಿ ಹಿಡನ್ ವ್ಯಾಲಿ ನೆಲೆನಿಂತಿದೆ. ಇದು ಮಾತಾ ಜಯಂತಿ ದೇವಿ ಮಂದಿರಕ್ಕೆ ಸಮೀಪದಲ್ಲಿದೆ. ಪ್ರವಾಸೋದ್ಯಮ ತಾಣವಾಗಿರುವ ಈ ಪರಿಸರವು ವಿನೋದ ಹಾಗೂ ಸಾಹಸಕ್ಕೆ ಪರಿಪೂರ್ಣ ವ್ಯಾಖ್ಯಾನ ಬರೆದಂತಿದೆ. ನೈಜ ಪ್ರಕೃತಿ ಮಧ್ಯೆ ಹಿಡನ್ ವ್ಯಾಲಿಯಲ್ಲಿ ಪ್ರಯಾಣಿಕರು ಬಂಗೀ ಜಂಪಿಂಗ್, ಮೌಂಟೇನ್ ಬೈಕಿಂಗ್ ಮತ್ತು ರೋಪ್ ಕ್ಲೈಬಿಂಗ್ ನಂತಹ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದು.

ಪ್ರವಾಸಿಗಳು ಇಲ್ಲಿ ಟೆಂಟ್ ಮತ್ತು ಹುಲ್ಲುಛಾವಣಿಯುಳ್ಳ ಮನೆಗಳಲ್ಲಿ ಕಾಲ ಕಳೆಯಬಹುದಲ್ಲದೆ ಒಂಟೆ ಅಥವಾ ಕುದುರೆ ಸವಾರಿ ಮೂಲಕ ಪ್ರಕೃತಿಯ ಸೊಬಗನ್ನು ಸವಿಯಬಹುದು. ಕಾರ್ಟ್ ರೈಡ್, ಸ್ಲೈಡ್ ಮತ್ತು ಸ್ವಿಂಗ್ ಹಾಗೂ ಇತರ ಆಟಗಳು ಸಾಹಸಿ ಪ್ರಿಯ ಪ್ರವಾಸಿಗರಿಗೆ ಮತ್ತಷ್ಟು ಮೋಜು ನೀಡುತ್ತದೆ. ಪ್ರಕೃತಿಯ ಸ್ವರ್ಗವಾಗಿರುವ ಈ ಪ್ರದೇಶದಲ್ಲಿ ಟ್ರಕ್ಕಿಂಗ್ ಮತ್ತು ಪಕ್ಷಿ ವೀಕ್ಷಣೆ ಕೂಡ ಮಾಡಬಹುದು. ನಗರದ ಒತ್ತಡ ಹಾಗೂ ಜಂಜಾಟದ ಜೀವನವನ್ನು ಮರೆತು ಇಲ್ಲಿ ಖುಷಿ ಪಡಬಹುದು. ಚಂದೀಗಢ್ ಗೆ ಭೇಟಿ ನೀಡಿದರೆ ಹಿಡನ್ ವ್ಯಾಲಿಗೆ ಭೇಟಿ ನೀಡಲು ಸಲಹೆ ಮಾಡಲಾಗುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed