ಬೇತ್ವಾ ನದಿಯ ತೀರದಲ್ಲಿರುವ ಸುಂದರ ಹಳ್ಳಿ ದಿಯೋಘರ್. ಈ ಹಳ್ಳಿ ಐತಿಹಾಸಿಕ ಮಹತ್ವವನ್ನು ಪಡೆದಿದೆ ಮತ್ತು ಶ್ರೀಮಂತ ಪ್ರಕೃತಿಯ ಮಡಿಲಿನಲ್ಲಿದೆ. ಚಾಂದೇರಿಯಿಂದ 71 ಕಿ ಮೀ ಅಂತರದಲ್ಲಿದೆ. ಈ ಹಳ್ಳಿ ಪ್ರಖ್ಯಾತ ಧಾರ್ಮಿಕ ಕೇಂದ್ರ ವಾಗಿದೆ. ವಾಸ್ತುಶಿಲ್ಪಕ್ಕೆ ಪ್ರಾಮುಖ್ಯತೆ ನೀಡಿರುವ ಹಲವಾರು ಕಟ್ಟಡಗಳನ್ನು ಈ ಹಳ್ಳಿಯಲ್ಲಿ ಕಾಣಬಹುದು. ಅದರಲ್ಲಿ 5 ನೇ ಶತಮಾನದ ದಶಾವತಾರ ವಿಷ್ಣು ದೇವಾಲಯವೂ ಒಂದು. ಗುಪ್ತರ ಕಾಲದಲ್ಲಿ ಈ ದೇವಾಲಯ ಕಟ್ಟಲಾಯಿತು. ಇಲ್ಲಿನ ವರಾಹ ದೇವಸ್ಥಾನ ವಿಶಿಷ್ಟ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಕೀರ್ತಿ ಗಿರಿ ಬೆಟ್ಟದ ಕೋಟೆ 12 ನೆ ಶತಮಾನದಲ್ಲಿ ಕೀರ್ತಿವರ್ಮ ರಾಜ ಕಟ್ಟಿದ್ದ ಮತ್ತೊಂದು ಸುಂದರ ರಚನೆ. ದಿಯೋಘರ್ ನಲ್ಲಿ ಜೈನ ಕಲ್ಲಿನ ಶಿಲ್ಪಗಳ ಸಮೃದ್ಧ ಸಂಗ್ರಹ ಇದೆ. ಇಲ್ಲಿರುವ ಮಹಾವೀರ ವನ್ಯಜೀವಿ ಅಭಯಾರಣ್ಯ ಸಾಕಷ್ಟು ವನ್ಯಜೀವಿಗಳನ್ನು ಹೊಂದಿದ್ದು, ಸಸ್ಯ ಸಂಪತ್ತೂ ಹೇರಳವಾಗಿದೆ.


Click it and Unblock the Notifications