ಕುಂಗಾವರಿ ಪುಕ್ ಮಿಜೋರಾಂ ನ ಅತ್ಯಂತ ಮಹತ್ವದ ಮತ್ತು ದೊಡ್ಡ ಗುಹೆಗಳಲ್ಲಿ ಒಂದಾಗಿದೆ. ಈ ಗುಹೆಯ ಚಂಫೈ ಜಿಲ್ಲೆಯ ಫರ್ಕವನ್ ಮತ್ತು ವಪಹೈ ಹಳ್ಳಿಗಳ ನಡುವೆ ಬೆಟ್ಟಗಳಲ್ಲಿ ಸ್ಥಿತವಾಗಿದೆ. ದಂತಕಥೆಯ ಪ್ರಕಾರ, ಶಕ್ತಿಗಳು/ಆತ್ಮಗಳು ಒಂದು ಸುಂದರವಾದ ಹುಡುಗಿಯನ್ನು ಅಪಹರಿಸಿ ಈ ಗುಹೆಯಲ್ಲಿ ಬಂಧಿಸಿಟ್ಟ ಕಾರಣ ಕುಂಗಾವರಿ ಎಂದು ಆ ಹುಡುಗಿಯ ಹೆಸರನ್ನೇ ಈ ಗುಹೆಗೆ ಇಡಲಾಗಿದೆ ಕುಂಗಾವರಿಗೆ ಒಬ್ಬ ಕೆಚ್ಚೆದೆಯ ಯುವಕ ಪಂಥಿರಾ ಎಂಬವನೊಂದಿಗೆ ನಿಶ್ಚಿತಾರ್ಥವಾಗಿತ್ತು.
ಪಂಥಿರಾ ಮಂತು ಕುಂಗಾವರಿ, ಪಂಥಿರಾನ ಹಳ್ಳಿಯಿಂದ ತೆರಳುತ್ತಿರುವ ಸಂದರ್ಭದಲ್ಲಿ ಈ ಘಟನೆಯು ನಡೆಯಿತು. ಕುಂಗಾವರಿಯ ಭವ್ಯವಾದ ಸೌಂದರ್ಯದಿಂದ ಆಕರ್ಷಿಸಲ್ಪಟ್ಟಿದ್ದ ಆತ್ಮಗಳು ಈ ಗುಹೆಗಳಲ್ಲಿ ಆಕೆಯನ್ನು ಅಪಹರಿಸಿ ಬಚ್ಚಿಟ್ಟಿದ್ದರು. ಗಂಡುಗಲಿ ಪಂಥಿರಾ ತನ್ನ ಪ್ರೀತಿಯ ಹುಡುಗಿಯನ್ನು, ಶಕ್ತಿಗಳು ವಿರುದ್ಧ ಧೈರ್ಯವಾಗಿ ಹೋರಾಡಿ ಬಿಡುಗಡೆ ಮಾಡುವವರೆಗೆ ಬಲಿಪಶು ಹುಡುಗಿ ಗುಹೆಯಲ್ಲಿಯೇ ಉಳಿದಳು. ನಂತರ ಈ ಗುಹೆಗೆ ಈ ಹುಡುಗಿಯ ಹೆಸರಿಡಲಾಗಿದೆ. ಚಂಫೈ ಪಟ್ಟಣದಿಂದ ಪ್ರವಾಸಿ ವಾಹನದ ಮೂಲಕ ಕುಂಗಾವರಿ ಪುಕ್ ತಲುಪಲು ಸಾಧ್ಯ.


Click it and Unblock the Notifications