ಹೆಸರೇ ಹೇಳುವಂತೆ, ಕರ್ಣವಾಸ್ ಐತಿಹಾಸಿಕ ನಗರವಾಗಿದ್ದು, ಮಹಾಭಾರತದ ದಿಗ್ಗಜ ಕರ್ಣನ ಹೆಸರನ್ನೆ ಇದಕ್ಕಿಡಲಾಗಿದೆ. ಕರ್ಣ ಮಹಾರಾಜ ಲೋಕೋಪಕಾರಿ ಕೆಲಸಕ್ಕೆ ಹೆಸರುವಾಸಿಯಾದವನು ಮತ್ತು ಇವನು ದಾನವೀರ ಕರ್ಣ ಎಂದೇ ಪ್ರಸಿದ್ದಿಯಾಗಿದ್ದವನು. ಇತಿಹಾಸದ ಪ್ರಕಾರ ಕರ್ಣ ಪ್ರತಿದಿನ ಐವತ್ತು ಕೆಜಿಯಷ್ಟು ಚಿನ್ನವನ್ನು ದಾನ ಮಾಡುತ್ತಿದ್ದನಂತೆ. ಪ್ರವಾಸಿಗರು ಕಲ್ಯಾಣಿ ದೇವಿಯ ಗುಡಿಗೂ ಭೇಟಿ ನೀಡಬಹುದು, ಇದು ಮಹಾಭಾರತದ ಅವಧಿಯಲ್ಲಿ ಬರುವಂತದ್ದು. ಕರ್ಣವಾಸ್ ಬುಲಂದ್ ಶಹರ್ ನಗರದಿಂದ ಸಮೀಪದಲ್ಲಿದ್ದು, ಆಟೋರಿಕ್ಷಾದ ಮೂಲಕವೂ ತಲುಪಬಹುದು.


Click it and Unblock the Notifications