ಜಿಯಾ ಉದ್ದೀನ್ ಬುಖಾರಿಯವರ ನೆನಪಿಗೆ ಈ ಸಮಾಧಿಯನ್ನು ನಿರ್ಮಿಸಲಾಗಿದೆ. ಇವರು 360 ರ ಸಂಖ್ಯೆಯಲ್ಲಿ ಸೈಯದ್‌ರ ಜೊತೆಗೆ ಬುಖಾರಾ ಪ್ರಾಂತ್ಯದಿಂದ ಕಾಶ್ಮೀರ ಕಣಿವೆಗೆ ಬಂದರು ಎಂದು ಹೇಳಲಾಗಿದೆ. ಇಲ್ಲಿನ ಜನಪ್ರಿಯ ನಂಬಿಕೆಗಳ ಪ್ರಕಾರ, ಹಲವು ಪವಾಡಗಳನ್ನು ಇವರು ಮಾಡಿದ್ದಾರೆ. ಅಂಧ ಬಾಲಕಿಯ ಕಣ್ಣನ್ನು ಸವರುವ ಮೂಲಕ ಅವಳಿಗೆ ದೃಷ್ಟಿ ಬರುವಂತೆ ಮಾಡಿದ್ದರು ಎಂದು ಇಲ್ಲಿನ ಜನರು ಹೇಳುತ್ತಾರೆ. ಪ್ರತಿ ವರ್ಷದ ಮುಸ್ಲಿಮ್ ಮಾಸವಾದ ರಜಾಬ್‌ನ 26ನೇ ದಿನ ಇಲ್ಲಿ ಉರುಸ್ ನಡೆಯುತ್ತದೆ. ತಮ್ಮ ಪ್ರಾರ್ಥನೆ ಮತ್ತು ಹರಕೆಯನ್ನು ಸಲ್ಲಿಸಲು ಬಹುಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.


Click it and Unblock the Notifications