ಯೂಸ್ಮಾರ್ಗ್‌ನಿಂದ ಸುಮಾರು 4 ಕಿ.ಮೀ ದೂರದಲ್ಲಿರುವ ನೀಲ್ನಾಗ್ ಸುಂದರ ಪ್ರವಾಸಿ ತಾಣ. ಯೂಸ್ಮಾರ್ಗ್‌ನಿಂದ ಇಲ್ಲಿಗೆ ಹೋಗುವ ದಾರಿ ಇಕ್ಕಟ್ಟಾಗಿದ್ದು ದಟ್ಟ ಕಾಡಿನಿಂದ ಕೂಡಿದೆ. ಕೆರೆಯ ನೀಲಿ ವರ್ಣದ ನೀರಿನಿಂದಾಗಿ ಈ ಹೆಸರು ಬಂದಿದೆ. ನೀಲ್ ಅಂದರೆ ನೀಲಿ ಎಂದೂ, ನಾಗ್ ಎಂದರೆ ಕೆರೆ ಎಂದೂ ಅರ್ಥ. ಪಿಕ್‌ನಿಕ್‌ಗೆ ಹೇಳಿ ಮಾಡಿಸಿದ ತಾಣವಿದು. ಕೆರೆಯಿಂದ ಸುಮಾರು 13 ಕಿ.ಮೀ ಚಾರಣ ಮಾಡಿದರೆ ಪ್ರವಾಸಿಗರ ಖುಷಿ ಇಮ್ಮಡಿಸುತ್ತದೆ.


Click it and Unblock the Notifications