ಆಗಾ ಸೈಯದ್ ಮೊಹಮ್ಮದ್ 1857ರಲ್ಲಿ ಇಮಾಮ್‌ಬಾರಾವನ್ನು ನಿರ್ಮಿಸಿದರು. ಕಾಶ್ಮೀರಿ ಶಿಯಾ ಮುಸ್ಲಿಮರಿಗೆ ಈ ಧಾರ್ಮಿಕ ತಾಣ ಅತ್ಯಂತ ಮತ್ವದ್ದು. ಇತಿಹಾಸಕಾರರ ಪ್ರಕಾರ, ಶಿಯಾ ಮುಸ್ಲಿಮ್ ಆಗಿದ್ದ ಆಗಾ ಸೈಯದ್ ಮೆಹದಿ ಈ ಇಮಾಮ್‌ಬಾರಾದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರಂತೆ. ಇಮಾಮ್‌ಬಾರಾ ಎಂದರೆ ಪ್ರಾರ್ಥನೆಯ ಪ್ರಮುಖ ಎಂದರ್ಥ. 19ನೇ ಶತಮಾನದ ಭಾರತೀಯ-ಇರಾನಿಯನ್ ವಾಸ್ತುಶಿಲ್ಪ ಶೈಲಿಯಲ್ಲಿ ಇಮಾಮ್‌ಬಾರಾವನ್ನು ನಿರ್ಮಿಸಲಾಗಿದೆ.
1924ರಲ್ಲಿ ಆಗಾ ಸೈಯದ್ ಸಾಹಿಬ್ ಈ ಇಮಾಮ್‌ಬಾರಾದ ವಿಸ್ತರಣೆಯನ್ನು ಮಾಡಲು ಯೋಜಿಸಿದಾಗ ಅನನ್ಯವಾದ ಒಳಾಂಗಣ ನಿರ್ಮಾಣಕ್ಕೆ ಮಿರ್ಗುಂಡ್‌ನ ಅಸ್ಗರ‍್ ಅಲಿ ನೆರವು ನೀಡಿದ್ದರು. ನಂತರ 1955 ರಲ್ಲಿ ಮತ್ತೊಮ್ಮೆ ಆಗಾ ಸೈಯದ್ ಯೂಸುಫ್ ಅಲ್ ಮೊಸಾವಿ ಮತ್ತು ಅಂಜುಮನ್ ಎ ಶರಿ ಶಿಯಾ ಈ ಇಮಾಮ್‌ಬಾರಾವನ್ನು ಅಭಿವೃದ್ಧಿಗೊಳಿಸಿದರು.
ಐದು ಪ್ರವೇಶ ದ್ವಾರಗಳನ್ನು ಹೊಂದಿರುವ ಇದರ ರಚನೆಯು ಮೊಟ್ಟೆಯಾಕಾರದ ಆಕೃತಿಯನ್ನು ಹೊಂದಿದೆ. ಪ್ರತಿ ಪ್ರವೇಶದ್ವಾರವೂ 12 ಅಡಿ ಅಗಲವಾಗಿದೆ ಮತ್ತು 5 ಪ್ರವೇಶ ದ್ವಾರಗಳಲ್ಲಿ ಒಂದು ಮಹಿಳೆಯರಿಗೆಂದೇ ಮೀಸಲಾಗಿದೆ. ಪ್ರವಾಸಿಗರು ಇಮಾಮ್‌ಬಾರಾಗೆ ಸಮೀಪದಲ್ಲಿನ ಮಸೀದಿಯನ್ನೂ ನೋಡಬಹುದು. ಇದನ್ನು ನಿರ್ಮಿಸಿದ್ದು ಆಗಾ ಸೈಯದ್ ಯೂಸುಫ್ ಅಲ್ ಮೊಸಾವಿ ಅಲ್ ಸಫ್ವಿ.


Click it and Unblock the Notifications