ಈಜಿಪ್ಟಿನ ಪಿರಮಿಡ್ ಮಾದರಿಯಲ್ಲೆ ನಿರ್ಮಿತವಾದ ಅಸವ್ಲಿ ಅಣೆಕಟ್ಟು ಬೋರ್ಡಿ ಗ್ರಾಮದ ಮತ್ತೊಂದು ಆಕರ್ಷಣೆ. ಡ್ಯಾಮ್‌ನ ವಿಸ್ತೀರ್ಣ 1160 ಅಡಿ ಹಾಗೂ 78 ಅಡಿ ಎತ್ತರ ಹೊಂದಿದೆ. ಆಣೆಕಟ್ಟಿನ ಒಂದು ಭಾಗದಲ್ಲಿ ಕೆರೆಗಳು, ಹಸಿರು, ಬೆಟ್ಟಗಳಿದ್ದರೆ, ಮತ್ತೊಂದು ಭಾಗದಲ್ಲಿ ಮೈದಾನವಿದ್ದು ಪುಟ್ಟ ಹಳ್ಳಿಯೊಂದನ್ನು ಕಾಣಬಹುದು. ಅತ್ಯುತ್ತಮ ಪಿಕ್‌ನಿಕ್ ತಾಣವಾಗಿರುವ ಅಸಾವ್ಲಿ ಆಣೆಕಟ್ಟಿನಿಂದ ಬೆಹ್ರೋಟ್ ಗುಹೆಗಳಿರುವ ಪ್ರದೇಶ ರಮಣೀಯವಾಗಿ ಗೋಚರಿಸುತ್ತದೆ. ಮಳೆಗಾಲದಲ್ಲಿ ಭೇಟಿ ನೀಡಿದರೆ, ಈ ಪ್ರದೇಶದ ಸೊಬಗನ್ನು ಕಣ್ತುಂಬ ಸವಿಯಬಹುದು. ಅಸವ್ಲಿ ಆಣೆಕಟ್ಟಿಗೆ ಹೊಂದಿಕೊಂಡಂತೆ ಮತ್ತಷ್ಟು ಕೆರೆಗಳು ಹಾಗೂ ಡ್ಯಾಮ್‌ಗಳಿವೆ.


Click it and Unblock the Notifications