ದೇವಾಲಯ ಪೂರ್ಣವಾಗದ ಕಾರಣ ಕೆತ್ತನೆಗಳು ಮತ್ತು ಕಲ್ಲುಗಳು ಹಾಗೆಯೇ ಉಳಿದಿದೆ. ಇಲ್ಲಿನ ಕಲ್ಲಿನ ರಚನೆಗಳು ಮತ್ತು ಇವುಗಳ ಪಳೆಯುಳಿಕೆಗಳು ಇಲ್ಲಿನ ವಿಶೇಷ. ದೇವಾಲಯ ನಿರ್ಮಿಸುತ್ತಿದ್ದ ಕಾಲದಲ್ಲಿ ಇಲ್ಲಿ ಶಿಲ್ಪಗಳನ್ನು ಕೆತ್ತುತ್ತಿದ್ದರು ಮತ್ತು ಕಲ್ಲನ್ನು ಇಲ್ಲಿ ಒಡೆದು ದೇವಾಲಯದ ನಿರ್ಮಾಣಕ್ಕಾಗಿ ಸಾಗಿಸುತ್ತಿದ್ದರು. ಹಲವಾರು ಕಂಬಗಳು, ಕೆತ್ತನೆಗಳು, ಅಚ್ಚುಗಳು ಹಾಗು ದೇವಸ್ಥಾನದ ನಕ್ಷೆ ಇಲ್ಲಿ ಕಾಣಸಿಗುತ್ತವೆ. ಮಣ್ಣಿನ ದಿಣ್ಣೆಯಿಂದ ಕಲ್ಲುಗಳನ್ನು ಇಲ್ಲಿಂದ ದೇವಾಲಯಕ್ಕೆ ಸಾಗಿಸುತ್ತಿದ್ದರು.


Click it and Unblock the Notifications