ಅದ್ಭುತ ವಾಸ್ತುಶಿಲ್ಪವನ್ನು ಹೊಂದಿರುವ ರಾಜಸ್ಥಾನದ ಹಲವು ಕೋಟೆಗಳಲ್ಲಿ, ಭರತ್ಪುರಿನ ಲೋಹಗರ್ ಕೋಟೆಯು ಒಂದಾಗಿದೆ. ಕಬ್ಬಿಣದ ಕೋಟೆ ಎಂದೂ ಕರೆಯಲಾಗುವ ಇದನ್ನು ಮಹಾರಾಜಾ ಸೂರಜ್ ಮಲ್ ಕಟ್ಟಿದ್ದಾನೆ. ತನ್ನ ಸದೃಢವಾದ ರಚನೆಗೆ ಹೆಸರುವಾಸಿಯಾದ ಈ ಕೋಟೆ, ಬ್ರಿಟೀಷರ ನಿರಂತರವಾದ ಆಕ್ರಮಣಗಳನ್ನು ಯಶಸ್ವಿಯಾಗಿ ತಡೆಹಿಡಿದಿತ್ತು.ಈ ಕೋಟೆಯಲ್ಲಿ, ಮಹಲ್ ಖಾಸ್, ಕಮ್ರಾ ಮಹಲ್ ಮತ್ತು ಪುರಾನಾ ಮಹಲ್ ಗಳೆಂಬ ಮೂರು ಅರಮನೆಗಳಿವೆ. ಇಂದು ಕಮ್ರಾ ಮಹಲ್ ರಾಜ್ಯದ ಪುರಾತತ್ವ ಸಂಗ್ರಹಾಲಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಇನ್ನುಳಿದಂತೆ, ಕಿಶೋರಿ ಮಹಲ್, ಕೋಠಿ ಖಾಸ್, ಮೊತಿ ಮಹಲ್, ಜವಾಹರ್ ಬುರ್ಜ್ ಮತ್ತು ಫತೆ ಬುರ್ಜ್ ಎಂಬ ಸ್ಮಾರಕಗಳನ್ನು ಈ ಕೋಟೆಯಲ್ಲಿ ಕಾಣಬಹುದು.


Click it and Unblock the Notifications