Search
  • Follow NativePlanet
Share
ಮುಖಪುಟ » ಸ್ಥಳಗಳು » ಭರತ್ಪುರ್ » ಆಕರ್ಷಣೆಗಳು » ದಿ ಕಿಯೊಲಾಡೀಯೊ ನ್ಯಾಷ್ನಲ್ ಪಾರ್ಕ್

ದಿ ಕಿಯೊಲಾಡೀಯೊ ನ್ಯಾಷ್ನಲ್ ಪಾರ್ಕ್, ಭರತ್ಪುರ್

5

ಭರತ್ಪುರ್ ನ ದಿ ಕಿಯೊಲಾಡೀಯೊ ನ್ಯಾಷ್ನಲ್ ಪಾರ್ಕ್ ಅತಿ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇದನ್ನು ದಿ ಕಿಯೊಲಾಡೀಯೊ ಘಾನಾ ನ್ಯಾಷ್ನಲ್ ಪಾರ್ಕ್ ಎಂದೂ ಕೂಡ ಕರೆಯಲಾಗುತ್ತದೆ ಮತ್ತು ಇದನ್ನು ಮಹಾರಾಜಾ ಸೂರಜ್ ಮಲ್ 250 ವರ್ಷಗಳ ಹಿಂದೆ ನಿರ್ಮಿಸಿದನು. ಭರತ್ಪುರ್ ನ ಮಹಾರಾಜರು ಇದನ್ನು 1964 ರ ವರೆಗೆ ಖಾಸಗಿಯಾಗಿ ಡಕ್ ಶೂಟಿಂಗ್ ಗೆಂದು ಮೀಸಲಿರಿಸಿದ್ದರು. ತದನಂತರ ಇದನ್ನು ಪಕ್ಷಿ ಧಾಮವಾಗಿ ಸ್ಥಾಪಿಸಲಾಯಿತು. 1982 ರಲ್ಲಿ ಇದನ್ನು ರಾಷ್ಟ್ರೀಯ ಉದ್ಯಾನವೆಂದು ಘೋಷಿಸಿ, ದಿ ಕಿಯೊಲಾಡೀಯೊ ಘಾನಾ ನ್ಯಾಷ್ನಲ್ ಪಾರ್ಕ್ ಎಂಬ ಹೆಸರನ್ನಿಡಲಾಯಿತು. 1985 ರಲ್ಲಿ ಈ ಪಾರ್ಕ್ ಯುನೆಸ್ಕೊದ ವಿಶ್ವ ಪರಂಪರೆಯ ತಾಣದ ಮಾನ್ಯತೆಯನ್ನು ಪಡೆಯಿತು.

ಪ್ರತಿ ವರ್ಷ ಪ್ರವಾಸಿಗರು ಬಹುಸಂಖ್ಯೆಯಲ್ಲಿ ಈ ಪಾರ್ಕ್ ಗೆ ಭೇಟಿ ನೀಡುತ್ತಾರೆ. ಸದ್ಯ ಇಲ್ಲಿ 7 ಬಗೆಯ ಆಮೆಗಳು, 50 ಬಗೆಯ ಮೀನುಗಳು, 5 ಬಗೆಯ ಉಭಯಚರಗಳಿದ್ದು,  375 ವಿಧಗಳ ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ.ಮಳೆಗಾಲದ ಸಮಯದಲ್ಲಿ, ದೇಶದ ನಾನಾ ಭಾಗಗಳಿಂದ ಪಕ್ಷಿಗಳು ಈ ಪಾರ್ಕ್ ಗೆ ಭೇಟಿ ನೀಡುತ್ತವೆ. ಸಾಮಾನ್ಯವಾಗಿ ನೀರು ಕೋಳಿಗಳು ಅದರಲ್ಲೂ ಬಾರ್ ಹೆಡೆಡ್ ಮತ್ತು ಗ್ರೇ ಲ್ಯಾಗ್ ಗೀಸ್ ಗಳು ಮತ್ತು ಇನ್ನಿತರ ಪಕ್ಷಿಗಳಾದ ಪಿನ್ ಟೇಲ್ ಗಳು, ಕಾಮನ್ ಟೇಲ್ ಗಳು, ಕಾಡು ಬಾತುಗಳು, ಶಾವೆಲೇರ್ಸ್ ಗಳು, ಸಾಮಾನ್ಯ ಹೆಣ್ಣು ಬಾತುಗಳು, ಕೆಂಪು ಜುಟ್ಟುಳ್ಳ ಪೋಚರ್ಡ್ ಗಳು ಮತ್ತು ಗಾಡ್ವಾಲ್ ಗಳು ಇಲ್ಲಿ ಕಾಣಸಿಗುವ ಕೆಲವು ಪಕ್ಷಿ ಪ್ರಭೇದಗಳು. ಇವುಗಳಲ್ಲದೆ, ಪ್ರವಾಸಿಗರು ಇಂಪೇರಿಯಲ್ ಈಗಲ್ಸ್, ಸ್ಟೆಪ್ ಈಗಲ್ಸ್, ಟಾವ್ನಿ ಈಗಲ್ಸ್, ಸ್ಪಾಟೆಡ್ ಈಗಲ್ಸ್, ಡೇಗೆ ಪಕ್ಷಿಗಳು, ಫಾಲ್ಕನ್ಸ್ ಗಳನ್ನು ಇಲ್ಲಿ ನೋಡಬಹುದು. ಇನ್ನು, ಇಲ್ಲಿರುವ ಕೆಲವು ಪ್ರಾಣಿಗಳೆಂದರೆ, ಬ್ಲ್ಯಾಕ್ ಬಕ್ಸ್, ಹೆಬ್ಬಾವುಗಳು, ಸಾಂಬಾರ್ ಗಳು, ಚುಕ್ಕೆ ಜಿಂಕೆಗಳು ಮತ್ತು ನೀಲ್ ಗಾಯ್ ಗಳು.ಭರತ್ಪುರ್ ನಿಂದ ರಿಕ್ಷಾ ಹಾಗು ಬಸ್ಸುಗಳ ಮೂಲಕ ಕಿಯೊಲಾಡೀಯೊ ಘಾನಾ ನ್ಯಾಷ್ನಲ್ ಪಾರ್ಕ್ ಗೆ ಸುಲಭವಾಗಿ ತಲುಪಬಹುದಾಗಿದೆ. ವಿದ್ಯುತ್ ಚಾಲಿತ ವ್ಯಾನ್ ಗಳು ಕೂಡ ಲಭ್ಯವಿದ್ದು ಕೋರಿಕೆಯ ಮೇಲೆ ದೊರೆಯುತ್ತದೆ. ಆದರೆ, ಈ ಪಾರ್ಕ್ ಅನ್ನು ಉತ್ತಮವಾಗಿ ಅವಲೋಕಿಸಬೇಕೆಂಬ ಬಯಕೆ ನಿಮಗಾಗಿದ್ದಲ್ಲಿ ಕಾಲ್ನಡಿಗೆ, ಸೈಕಲ್ ಅಥವಾ ಸೈಕಲ್ ರಿಕ್ಷಾ ಮೂಲಕ ಸಂಚರಿಸುವುದು ಪರಿಣಾಮಕಾರಿ. ಪಾರ್ಕ್ ಆಡಳಿತದಿಂದ, ಮಿತವಾದ ಬೆಲೆಯಲ್ಲಿ ಸೈಕಲ್ ಗಳು ಬಾಡಿಗೆಗೆ ದೊರೆಯುತ್ತವೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu