ಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ವಿಕ್ರಮ್ ಶಿಲಾ ಸೇತು ಎಂಬ ಸೇತುವೆ, ಪ್ರಾಚೀನ ಕಲಿಕಾ ಕೇಂದ್ರವಾಗಿದ್ದ ವಿಕ್ರಮ್ ಶಿಲಾ ವಿಶ್ವವಿದ್ಯಾಲಯದ ಹೆಸರಿನಿಂದ ನಾಮಾಂಕಿತವಾಯಿತು. ವಿಕ್ರಮ್ ಶಿಲಾ ಸೇತು ಭಾರತದ ಮೂರನೆಯ ಅತೀ ದೊಡ್ಡ ಸೇತುವೆಯಾಗಿದ್ದು, ಇದು ರಾಹೆ 80 ಹಾಗೂ ರಾಹೆ 31 ನ್ನು ಸಂಪರ್ಕಿಸುತ್ತದೆ. ರಾಹೆ 80 ಹಾಗೂ ರಾಹೆ 31 ಗಂಗಾ ನದಿಯ ಎರಡು ಬದಿಯಲ್ಲಿ ಸಮಾನಾಂತರವಾಗಿ ಸಾಗುವ ರಸ್ತೆಗಳಾಗಿವೆ. ಈ ಸೇತುವೆಯು ಇಲ್ಲಿನ ಸ್ಥಳೀಯರಿಗೆ ಪಾಲಿಗೆ ಒಂದು ವರವೇ ಸರಿ.


Click it and Unblock the Notifications