Search
  • Follow NativePlanet
Share
ಮುಖಪುಟ » ಸ್ಥಳಗಳು » ಬರೇಲಿ » ಆಕರ್ಷಣೆಗಳು » ದರ್ಗಾ ಏ ಅಲ-ಹಜ಼ರತ್

ದರ್ಗಾ ಏ ಅಲ-ಹಜ಼ರತ್, ಬರೇಲಿ

2

ಬರೇಲಿಗೆ ಅಂತರ ರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟ ಸ್ಮಾರಕ ದರ್ಗಾ ಏ ಅಲ ಹಜ಼ರತ್. ಇದು ನಗರದ ಸೌದಾಗರನ್ ಮೊಹಲ್ಲಾದಲ್ಲಿದೆ. ಇದು ಮುಸ್ಲಿಂ ಸಂತ ಮತ್ತು ಪಂಡಿತ ಅಲ್‍ಹಜರತ್ ಇಮಾಂ ಅಹಮದ್ ರಜಾ಼ ಖಾನನ ನೆನಪಿಗೆ ಕಟ್ಟಿದ್ದು.

1856 ಜೂನ್ 14ರಂದು ಹುಟ್ಟಿದ ಈ ಮಹಾನ್ ಪಂಡಿತನಿಗೆ ಅಲ-ಹಜ಼ರತ್- ಬುದ್ಧಿವಂತ ವ್ಯಕ್ತಿ ಎಂದು ಬಿರುದು ನೀಡಲಾಗಿತ್ತು. ಏಕೆಂದರೆ ಆತ ಜ್ಞಾನಕ್ಕೆ ರೂಪಕದಂತಿದ್ದ ಮತ್ತು ಸಾಹಿತ್ಯ ಲೋಕದ ಧ್ರುವತಾರೆಯಾಗಿದ್ದ. ಅವನು ಮುಸ್ಲಿಂ ಧರ್ಮದ ಬಗ್ಗೆ ಅಧಿಕೃತವಾಗಿ ತಿಳಿದವನಾಗಿದ್ದ. ಆತ ಈ ಸ್ಥಳವನ್ನು ಇಸ್ಲಾಮಿಕ್ ಜ್ಞಾನದ ಮುಖ್ಯ ಕೇಂದ್ರವಾಗಿಸಿದ ಮತ್ತು ಇದು ಪ್ರಪಂಚದಾದ್ಯಂತ ಜನರಿಗೆ ಮುಖ್ಯ ಯಾತ್ರಾ ಸ್ಥಳವಾಯಿತು. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆತನ ಉರ್ದು, ಅರೇಬಿಕ್ ಮತ್ತು ಪರ್ಶಿಯನ್ ಸಾಹಿತ್ಯ ಕೃತಿಗಳನ್ನು ಓದಲು ಬರುತ್ತಾರೆ.

ಈತ ರಚಿಸಿರುವ ಶ್ರೇಷ್ಟ ಕೃತಿಯೆಂದರೆ ಫತ್ವಾ ರಧ್ವಾ. ಇದು 12 ಸಂಪುಟಗಳು ಮತ್ತು 12000 ಪುಟಗಳ ಗ್ರಂಥ. ಇದು ಮುಸ್ಲಿಂರು ದಿನನಿತ್ಯದ ಜೀವನದಲ್ಲಿ ಎದುರಿಸುವ ಧಾರ್ಮಿಕ ಮತ್ತು ಸೌಹಾರ್ದಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed