ಹಿಮ್ರೂ ಕಾರ್ಖಾನೆಯು ಸಾಂಪ್ರಾದಾಯಿಕ ಹಿಮ್ರೂ ವಸ್ತ್ರದ ತವರೂರಾಗಿದೆ. ಔರಂಗಬಾದ್ ನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಇದು ಹಳೆ ನಗರದ ಝಾಪರ್ ದ್ವಾರದ ಬಳಿಯಲ್ಲಿದೆ.ಹಿಮ್ರೂ ವಸ್ತ್ರವು ಗುಣಮಟ್ಟದ ಹತ್ತಿ ಮತ್ತು ರೇಷ್ಮೆಗಳ ಮಿಶ್ರಣಕ್ಕೆ ಹೆಸರುವಾಸಿಯಾಗಿದೆ.ಈ ವಸ್ತ್ರಗಳ ಮೇಲಿರುವ ವಿನ್ಯಾಸ ಮತ್ತು ಮಾದರಿ ಅಜಂತಾದಲ್ಲಿರುವ ಚಿತ್ರಕಲೆಯಿಂದ ಸ್ಫೂರ್ತಿ ಪಡೆದಿದ್ದುದಾಗಿದೆ.ಪೈಥಾನಿ ಸೀರೆಗಳು ಮತ್ತು ಸಾಂಪ್ರದಾಯಿಕ ಕೈಮಗ್ಗದ ಶಾಲುಗಳು ಇಲ್ಲಿ ದೊರೆಯುವ ಇನ್ನಿತರ ವಸ್ತುಗಳಾಗಿವೆ.


Click it and Unblock the Notifications