ಗುಲ ಮಂಡಿಯು ಸಹ ಔರಂಗಬಾದಿನ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇಲ್ಲಿ ಬಗೆಬಗೆಯ ಉತ್ಪನ್ನಗಳನ್ನು ಮಾರಲಾಗುತ್ತದೆ. ಈ ಮಾರುಕಟ್ಟೆಯಲ್ಲಿ ದೊರೆಯುವ ಉತ್ಪನ್ನಗಳು ನೀವು ಭೇಟಿ ಕೊಡುವ ದಿನವನ್ನು ಅವಲಂಬಿಸಿರುತ್ತದೆ.
ಈ ಮಾರುಕಟ್ಟೆಯಲ್ಲಿ ಅತ್ಯುತ್ತಮ ದರ್ಜೆಯ ಉತ್ಪನ್ನಗಳು ಬಿಕರಿಯಾಗುತ್ತವೆ. ಇಲ್ಲಿ ಸಾಂಪ್ರದಾಯಿಕವಲ್ಲದ ಶಾಪಿಂಗ್ ಮಾಲ್ ಗಳ ಜೊತೆಗೆ ವಿವಿಧ ಬಗೆಯ ವಸ್ತ್ರಗಳು, ಹಿಮ್ರೂ ರೇಷ್ಮೆ, ಮತ್ತು ಇಲ್ಲಿನ ವಿಶೇಷವಾದ ಉತ್ಪನ್ನವಾದ ಪೈಥಾನಿ ಸೀರೆಗಳು ಲಭ್ಯವಿರುತ್ತವೆ.