ಔರಂಗಬಾದ್ ಗುಹೆಗಳು ಬಿಬಿ ಕ ಮಕ್ಬಾರಕ್ಕೆ ಸಮೀಪದಲ್ಲಿ ನೆಲೆಸಿದೆ. ಈ ಅದ್ಭುತವಾದ ಗುಹೆಗಳು ಬೌದ್ಧರ ಮೂಲದಿಂದ ಬಂದಿವೆ. ಇವುಗಳನ್ನು 2 ರಿಂದ 7 ನೆ ಶತಮಾನಗಳ ನಡುವೆ ನಿರ್ಮಿಸಲಾಗಿರಬಹುದು ಎಂದು ಭಾವಿಸಲಾಗಿದೆ.
ಇಲ್ಲಿ ಹತ್ತು ಗುಹೆಗಳಿದ್ದು, ಎರಡು ಪ್ರತ್ಯೇಕವಾದ ಭಾಗಗಳಾಗಿ ವಿಭಜಿಸಲ್ಪಟ್ಟಿದೆ. ಮೊದಲ ಐದು ಗುಹೆಗಳು ಪಶ್ಚಿಮ ಗುಂಪಿನ ಗುಹೆಗಳಲ್ಲಿ ಬಂದರೆ, ಇನ್ನುಳಿದ ಐದು ಗುಹೆಗಳು ಪೂರ್ವ ಗುಂಪಿನ ಗುಹೆಗಳ ಅಡಿಯಲ್ಲಿ ಬರುತ್ತವೆ. ಇವುಗಳಲ್ಲಿರುವ 3ನೇ ಗುಹೆ ಮತ್ತು 7ನೇ ಗುಹೆಗಳು ನೋಡುಗರನ್ನು ಮೂಕವಿಸ್ಮಿತರನ್ನಾಗಿಗೊಳಿಸುವಂತಹ ಗುಹೆಗಳಾಗಿವೆ.
ಚಿತ್ರಗಳ ವಿನ್ಯಾಸವು ಹಿಂದೂ ತಾಂತ್ರಿಕ್ ನಿಂದ ಪ್ರೇರಣೆ ಪಡೆದಿರುವುದಕ್ಕೆ ಸಾಕ್ಷಿಗಳು ಸಿಗುತ್ತವೆ.
ಪ್ರವೇಶ ಶುಲ್ಕ ಭಾರತೀಯರಿಗೆ 10 ರೂಪಾಯಿ ಮತ್ತು 100 ರೂಪಾಯಿ ವಿದೇಶಿಯರಿಗೆ ಇದೆ. ಸಮಯ ಬೆಳಗ್ಗೆ 9ರಿಂದ ಸಂಜೆ 5 ರವರೆಗೆ ಇರುತ್ತದೆ.


Click it and Unblock the Notifications