ಶ್ರೀ ಅಕಾಲ್ ತಖ್ತ್ ಎಂದರೆ ಶಾಶ್ವತ ಸಿಂಹಾಸನ ಎಂದು ಅರ್ಥ. ಇದು ಖಲ್ಸಾ ಪಂಥದ ಅತ್ಯುನ್ನತ ಸ್ಥಾನವಾಗಿದ್ದು, ಸಿಖ್ ಧರ್ಮೀಯರ ಎಲ್ಲ ಆಧ್ಯಾತ್ಮಿಕ ಚಟುವಟಿಕೆಯ ಕೇಂದ್ರವಾಗಿದೆ. ಸಿಖ್ಖರ 6ನೇ ಧರ್ಮಗುರುವಾಗಿರುವ ಗುರು ಹರಗೋಬಿಂದ್ ಜೀ ಅವರು ನಿರ್ಮಿಸಿರುವ ಶ್ರೀ ಅಕಾಲ್ ತಖ್ತ್ ಅತ್ಯಂತ ಹಳೆಯದಾಗಿದ್ದು, ಭಾರತದಲ್ಲಿರುವ ಎಲ್ಲ ಐದು ತಖ್ತ್‌ಗಳಿಗಿಂತ ಶ್ರೇಷ್ಠವಾಗಿದೆ. ಹರಮಂದಿರ ಸಾಹೀಬ್ ಕಾಂಪ್ಲೆಕ್ಸ್ ನಲ್ಲಿ ಇರುವ ಶ್ರೀ ಅಕಾಲ್ ತಖ್ತ್ ಜಾಗವನ್ನು ಎಲ್ಲ ಸಿಖ್ಖರು ಸೇರಿದಂತೆ ಪ್ರವಾಸಿಗರು ಅಗತ್ಯವಾಗಿ ನೋಡಲೇಬೇಕಾದ ಪ್ರವಾಸಿ ತಾಣ.


Click it and Unblock the Notifications