Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮೃತಸರ್ » ಆಕರ್ಷಣೆಗಳು » ಮಹಾರಾಜ ರಂಜಿತ್ ಸಿಂಗ್ ಮ್ಯೂಸಿಯಂ

ಮಹಾರಾಜ ರಂಜಿತ್ ಸಿಂಗ್ ಮ್ಯೂಸಿಯಂ, ಅಮೃತಸರ್

4

ಅಮೃತಸರದ ಸುಂದರ ರಾಮ್ ಬಾಗ್ ಗಾರ್ಡನ್ ನಲ್ಲಿ ಈ ಮಹಾರಾಜ ರಂಜಿತ್ ಸಿಂಗ್ ವಸ್ತುಸಂಗ್ರಹಾಲಯ ಇದೆ. ಮೊದಲಿಗೆ ರಾಜನ ಬೇಸಿಗೆ ಅರಮನೆಯಾಗಿದ್ದ ಇದನ್ನು ಈಗ ಮಹಾರಾಜ ರಂಜಿತ್ ಸಿಂಗ್ ನ ಪರಂಪರೆಯ ಆಸ್ತಿಯ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಸುಂದರವಾದ ಗಾರ್ಡನ್ ನಲ್ಲಿ ಉಪಸ್ಥಿತವಿರುವ ಇದರ ಪ್ರವೇಶ ದ್ವಾರ ಉತ್ತಮ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ.

ಈ ಮ್ಯೂಸಿಯಂ ಮುಘಲರ ಕಾಲಕ್ಕೆ ಸಂಬಂಧಿಸಿದ ಅನೇಕ ಆಯುಧಗಳು, ನಾಣ್ಯಗಳು, ಕೈಬರಹಗಳನ್ನು ಒಳಗೊಂಡಿದೆ. ಪಂಜಾಬನ್ನು ಆಳಿದವರ ಭಾವಚಿತ್ರಗಳು, ಪಂಜಾಬ್ ರಾಜರ ಮತ್ತು ದರ್ಬಾರ್ ಹಾಲಿನ ತೈಲವರ್ಣ ಚಿತ್ರಗಳು ಮನಸೆಳೆಯುತ್ತವೆ. ಮ್ಯೂಸಿಯಂನಲ್ಲಿ ಮತ್ತೊಂದು ಆಕರ್ಷಣೆಯೆಂದರೆ, ಕೊಹಿನೂರ್ ವಜ್ರದ ಪಡಿಯಚ್ಚು ಪ್ರದರ್ಶನಕ್ಕಿರುವುದು. ಹಾಗೆಯೆ ಮಹಾರಾಜ ರಂಜಿತ್ ಸಿಂಗ್ ನ ಕಾಲದ ಮುದ್ರೆಗಳನ್ನು ಪ್ರದರ್ಶನಕ್ಕಿಡಲಾಗಿದೆ. ಸಿಖ್ ಸಮುದಾಯದ ಸಂಪ್ರದಾಯ ಹಾಗು ಇತಿಹಾಸವನ್ನು ತೆರೆದಿಡುವ ಈ ವಸ್ತುಸಂಗ್ರಹಾಲಯವನ್ನು ಪ್ರವಾಸಿಗರು ತಪ್ಪದೆ ನೋಡಬೇಕು.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun