ದಿನ | ಹೊರನೋಟ | ಗರಿಷ್ಠ | ಕನಿಷ್ಠ |
Saturday 23 Feb | ![]() |
9 ℃ 49 ℉ | 21 ℃70 ℉ |
Sunday 24 Feb | ![]() |
10 ℃ 51 ℉ | 21 ℃70 ℉ |
Monday 25 Feb | ![]() |
10 ℃ 51 ℉ | 17 ℃63 ℉ |
Tuesday 26 Feb | ![]() |
9 ℃ 49 ℉ | 18 ℃65 ℉ |
Wednesday 27 Feb | ![]() |
8 ℃ 47 ℉ | 12 ℃54 ℉ |
ಮುಂಗಾರು ಮುಗಿದ ಮೇಲೆ ಸೆಪ್ಟೆಂಬರ್ ಶುರುವಿನಿಂದ ಅಮೃತಸರದಲ್ಲಿ ಹವಾಮಾನವು ಹಿತಕರವಾಗಿರುತ್ತದೆ. ಉಷ್ಣಾಂಶ ಹಗಲು ಮತ್ತು ರಾತ್ರಿ ಕಡಿಮೆ ಇರುತ್ತದೆ. ಇದರ ನಂತರದ ಚಳಿಗಾಲ ತಂಪಾಗಿ ಇದ್ದು ಪ್ರವಾಸಿ ತಾಣಗಳಿಗೆ ಭೇಟಿ ಕೊಡಲು ಮತ್ತು ಇತರ ಹೊರಗಿನ ಚಟುವಟಿಕೆಗಳಿಗೆ ಸೂಕ್ತ ಸಮಯವಾಗಿರುತ್ತದೆ. ಹೀಗಾಗಿ ಅಮೃತಸರಕ್ಕೆ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್.
ಅಮೃತಸರದಲ್ಲಿ ಬೇಸಿಗೆ ಕಾಲ ಏಪ್ರಿಲ್ ತಿಂಗಳಲ್ಲಿ ಶುರುವಾಗಿ ಜೂನ್ ವರೆಗೆ ಇರುತ್ತದೆ. ಉಷ್ಣಾಂಶವು 45 ಡಿಗ್ರಿ ಸೆಂಟಿಗ್ರೇಡ್ ವರೆಗೆ ಏರುತ್ತದೆ. ಆದ್ದರಿಂದ ಪ್ರವಾಸಿಗರು ಈ ಸಮಯದಲ್ಲಿ ಅಮೃತಸರಕ್ಕೆ ಪ್ರವಾಸ ಕೈಗೊಳ್ಳುವುದು ಅಷ್ಟು ಹಿತಕರವಲ್ಲ.
ಅಮೃತಸರದಲ್ಲಿ ಮಳೆಗಾಲದ ಸಮಯದಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿಯುತ್ತದೆ. ವಾರ್ಷಿಕವಾಗಿ ಅಂದಾಜು 541.9 ಮಿ.ಮೀ.ನಷ್ಟು ಮಳೆ ಬೀಳುತ್ತದೆ. ಈ ಸಂದರ್ಭದಲ್ಲಿ ಹಗಲಿನ ಉಷ್ಣಾಂಶ ಕೂಡ ತಗ್ಗಿ ಆಹ್ಲಾದಕರ ವಾತಾವರಣ ಕಲ್ಪಿಸಿರುತ್ತದೆ. ಜುಲೈನಿಂದ ಸೆಪ್ಟೆಂಬರ್ ವರೆಗೆ ಇಲ್ಲಿ ಹಿತಕರ ವಾತಾವರಣವಿರುತ್ತದೆ. ಸೆಪ್ಟೆಂಬರ್ ನಂತರ ನವೆಂಬರ್ ವರೆಗೆ ಮುಂಗಾರಿನ ತರುವಾಯ ರಾತ್ರಿಗಳು ಜಾಸ್ತಿ ತಂಪಾಗಿರುತ್ತವೆ.
ಚಳಿಗಾಲ ಅಮೃತಸರದಲ್ಲಿ ನವೆಂಬರ್ ನಿಂದ ಮಾರ್ಚ್ ವರೆಗೆ ಇರುತ್ತದೆ. ಈ ಸಮಯದಲ್ಲಿ ಕೊರೆಯುವ ಚಳಿ ಸಾಮಾನ್ಯವಾಗಿರುತ್ತದೆ. ಉಷ್ಣಾಂಶವು ಈ ಸಮಯದಲ್ಲಿ 4 ಡಿಗ್ರಿಯಿಂದ 18 ಡಿಗ್ರಿವರೆಗೆ ಇರುತ್ತದೆ. ಆಗಾಗ್ಗೆ ಇದಕ್ಕಿಂತಲೂ ಕಡಿಮೆ, ಅಂದರೆ ಫ್ರೀಜರ್ ಪಾಯಿಂಟ್‌ಗೆ ಬರುವ ಸಂಭವವಿರುತ್ತದೆ. ಪಶ್ಚಿಮದಲ್ಲಿ ಉಂಟಾಗುವ ಹವಾಮಾನ ವೈಪರೀತ್ಯದಿಂದಾಗಿ ಚಳಿಗಾಲದಲ್ಲಿ ಚಂಡಮಾರುತದಿಂದ ಕೂಡಿದ ಮಳೆಗೆ ಕಾರಣವಾಗುತ್ತದೆ.