Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮೃತಸರ್ » ಆಕರ್ಷಣೆಗಳು » ಗುರುದ್ವಾರ ದಮ್ ದಮಾ ಸಾಹೀಬ್

ಗುರುದ್ವಾರ ದಮ್ ದಮಾ ಸಾಹೀಬ್, ಅಮೃತಸರ್

1

ಅಮೃತಸರಕ್ಕೆ ಭೇಟಿ ಕೊಡಲು ಸೂಕ್ತ ಎಂದು ಸೂಚಿಸುವ ಅನೇಕ ಧಾರ್ಮಿಕ ಸ್ಥಳಗಳಲ್ಲಿ ಗುರುದ್ವಾರ ದಮ್ ದಮಾ ಸಾಹೀಬ್ ಕೂಡ ಒಂದು. ಲುಧಿಯಾನದಿಂದ ಸುಮಾರು 23 ಕಿ.ಮೀ. ದೂರದಲ್ಲಿ ಈ ಗುರುದ್ವಾರವಿದೆ. ಆರನೇ ಸಿಖ್ ಗುರುವಾದ ಗುರು ಹರಗೋಬಿಂದ್ ಜಿಯವರು 1705ನೇ ಇಸ್ವಿಯಲ್ಲಿ ಇದೇ ಸ್ಥಳದಲ್ಲಿ ಸ್ವಲ್ಪ ಸಮಯ ವಿಶ್ರಮಿಸಿಕೊಂಡಿದ್ದರು. ಇದರ ಜ್ಞಾಪಕಾರ್ಥವಾಗಿ ಈ ಗುರುದ್ವಾರವನ್ನು ನಿರ್ಮಿಸಲಾಗಿದೆ.

ಇಲ್ಲಿ ಕಾಲ ಕಳೆದ ಸಮಯದಲ್ಲಿ ಗುರು ಹರಗೋಬಿಂದ್ ಜಿಯವರು ಸಿಂಗ್ ಗಳನ್ನು ಸಿಖ್ ಸಮುದಾಯದ ಮೇಲೆ ಅವರಿಗೆ ಇರುವ ನಂಬಿಕೆಯನ್ನು ಪರೀಕ್ಷಿಸುತ್ತಿದ್ದರು. ಬಾಬಾ ಡಾಲ್ ಎಂಬುವವರಿಗೆ ನೀರು ಪ್ರೋಕ್ಷಿಸಿ ಸಿಖ್‌ರ ಮತಕ್ಕೆ ಸೇರಿಸಿ ಅವರ ಹೆಸರನ್ನು ಡಾಲ್ ಸಿಂಗ್ ಎಂದು ಮರುನಾಮಕರಣ ಮಾಡಿದರು. ಹುತಾತ್ಮರಾದ ಭಾಯಿ ಮಣಿಸಿಂಗ್ ಜಿ ರಚಿಸಿದ 'ಬೀಡ್ ಆಫ್ ಆದ್ ಗುರು ಗ್ರಂಥ ಸಾಹೀಬ್' ಅನ್ನು ಗುರುಗಳು ಅನುಮೋದಿಸಿದ್ದು ಇಲ್ಲಿಯೆ. ಗುರು ಗೋಬಿಂದ್ ಜಿಯವರು ಈ ಸ್ಥಳಕ್ಕೆ ಪೂರ್ಣ ನಂಬಿಕೆ ಮತ್ತು ಭಕ್ತಿಯಿಂದ ಯಾರೇ ಭೇಟಿ ನೀಡಿದರೂ ಅವರ ಇಚ್ಛೆ ಪೂರೈಸುತ್ತದೆ ಎಂದು ಹರಸಿದ್ದಾರೆ.

ನಿಹಾನ್ ಸಿಂಗರು ಗುರುದ್ವಾರ ದಮ್ ದಮಾದ ಮೇಲುಸ್ತುವಾರಿಯನ್ನು ತೆಗೆದುಕೊಂಡಿದ್ದಾರೆ. ಇದನ್ನು ಖಲ್ಸಾ ಪಂಥದ 4ನೇ ಪವಿತ್ರ ತಖ್ತ್ ಎಂದು ಪರಿಗಣಿಸಲಾಗಿದೆ. ಪ್ರತಿ ಸಂಕ್ರಾಂತಕ್ಕೆ ಗುರುದ್ವಾರಾದಲ್ಲಿ ದೊಡ್ಡ ದಿವಾನ್ ಗಳನ್ನು ಆಯೋಜಿಸಲಾಗುತ್ತದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat