Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಾಂಗ್ » ಆಕರ್ಷಣೆಗಳು » ಮೆಚುಕ

ಮೆಚುಕ, ಅಲಾಂಗ್

14

ನೀಲಮಯ ಪರ್ವತಗಳಿಂದ ಕೂಡಿದ ಮೆಚುಕ ಅಡವಿಗಳು ತಮ್ಮ ದಟ್ಟತೆಯಿಂದಾಗಿ ಗಮನಸೆಳೆಯುತ್ತವೆ. ಇವು ಮೆಂಬ ಎಂಬ ಬುಡಕಟ್ಟು ಜನರಿಗೆ ಆಶ್ರಯವನ್ನು ಒದಗಿಸಿದ ಅರಣ್ಯವಾಗಿದೆ. ಈ ಊರು ತನ್ನ ಪ್ರಾಕೃತಿಕ ಸೌಂದರ್ಯದಿಂದಾಗಿ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಜೊತೆಗೆ ಇಲ್ಲಿ ಒಂದು ಬೌದ್ಧ ಮಠವು ಸಹ ಇದೆ. ಈ ಬೌದ್ಧ ಮಠವನ್ನು ಸುಮಾರು 400 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಇಲ್ಲಿನ ಗ್ರಂಥಾಲಯದಲ್ಲಿ ಹಲವಾರು ಬೌದ್ಧ ಶಾಸನಗಳನ್ನು ಮತ್ತು ಪುಸ್ತಕಗಳನ್ನು ಸಂರಕ್ಷಿಸಿ ಇಡಲಾಗಿದೆ. ಇದು ಅಲಾಂಗ್‍ನ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿದೆ. ಆ ಪ್ರದೇಶವನ್ನು ಸಮ್ಟೆನ್ ಯೊಂಗ್‍ಚ ಎಂದು ಕರೆಯುತ್ತಾರೆ. ಇದು ಬೌದ್ಧರ ಅತ್ಯಂತ ಹಳೆಯ ಮಠಗಳಲ್ಲಿ ಒಂದಾಗಿದೆ. ಮೆಚುಕದಲ್ಲಿ ಹಲವಾರು ಪ್ರಾಚೀನ ವಿಗ್ರಹಗಳು ಕಂಡು ಬರುತ್ತವೆ.

ಅತ್ಯಂತ ಸುಂದರವಾದ ಮೆಚುಕ ಕೆರೆಯು ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ್ದು, ಇಲ್ಲಿಗೆ ಭೇಟಿ ನೀಡುವವರಿಗೆ ಪ್ರಕೃತಿ ಮಾತೆಯ ದಿವ್ಯ ಸಾನ್ನಿಧ್ಯದ ಅನುಭವವನ್ನು ನೀಡುತ್ತದೆ. ಸಿಯೊಮ್ ನದಿಯು ಮೆಚುಕದ ಕಣಿವೆಗಳ ಗುಂಟ ಹರಿಯುತ್ತದೆ. ಮೆಚುಕವು ಭಾರತ -ಟಿಬೆಟ್ ಗಡಿಭಾಗದಿಂದ ಕೇವಲ 29 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಅಡಿ ಅಥವಾ ರಾಮೊ ಜನ ಎಂದು ಕರೆಯಲ್ಪಡುವ ಬುಡಕಟ್ಟು ಜನರು ಇಲ್ಲಿ ವಾಸವಾಗಿದ್ದಾರೆ. ಲಿಲಾಬರಿ ಎಂಬುದು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed