ಆಕಾಶಿಗಂಗಾ ಎಂಬುದು ಅಲಾಂಗ್‍ನ ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಇದೊಂದು ಪರ್ವತಗಳಿಂದ ಹರಿದು ಬರುವ ನೀರಿಗಾಗಿ ನಿರ್ಮಿಸಲಾಗಿರುವ ಕಾಲುವೆಯಾಗಿದೆ. ನಂಬಿಕೆಗಳ ಪ್ರಕಾರ ಶಿವನ ದೇಹದಿಂದ ಬೇರ್ಪಡಲು ಇಚ್ಚಿಸದೆ, ಆತನ ದೇಹದಲ್ಲಿ ಅರ್ಧ ಪಾಲನ್ನು ತೆಗೆದುಕೊಂಡ ಪಾರ್ವತಿಯನ್ನು ಶಿವನಿಂದ, ಅಂದರೆ ಅರ್ಧ ನಾರೀಶ್ವರನಿಂದ ಬೇರ್ಪಡಿಸುವ ಸಲುವಾಗಿ ವಿಷ್ಣುವು ಶಿವನ ದೇಹವನ್ನು ಕತ್ತರಿಸಿದಾಗ, ಪಾರ್ವತಿಯ ರುಂಡವು ಇಲ್ಲಿ ಬಿದ್ದಿತಂತೆ. ಹಾಗಾಗಿ ಈ ಸ್ಥಳವು ಹಿಂದೂಗಳ ಪಾಲಿಗೆ ಒಂದು ಪವಿತ್ರ ಪೀಠಸ್ಥಾನವಾಗಿದೆ. ಇಲ್ಲಿರುವ ಕೊಳದಲ್ಲಿ ಸ್ನಾನಮಾಡುವುದು ಸಹ ಪವಿತ್ರ ಕಾರ್ಯವೆಂದು ಎಂದು ಹೇಳಲಾಗುತ್ತದೆ. ಇದರ ಜೊತೆಗೆ ಇಲ್ಲಿ ಒಂದು ಪವಿತ್ರ ಕುಂಡ ಸಹ ಇದೆ. ಈ ಬೆಟ್ಟದ ಕೆಳಗೆ ಹರಿಯುವ ಬ್ರಹ್ಮ ಪುತ್ರ ನದಿಯ ಸುಂದರವಾದ ನೋಟವು ಸಹ ಮನಮೋಹಕವಾಗಿರುತ್ತದೆ. ಭಕ್ತಾಧಿಗಳು ಇಲ್ಲಿಗೆ ವರ್ಷದ ಎಲ್ಲಾ ದಿನಗಳಲ್ಲಿ ಆಗಮಿಸುತ್ತಿರುತ್ತಾರೆ.


Click it and Unblock the Notifications