ಕ್ರಿಶ್ಚಿಯನ್ನರ ನಂಬಿಕೆಯ ಪ್ರಕಾರ ಕಟ್ಟಿದ ಸುಂದರ ಭವನ ಇದು. ಧರ್ಮದ ಪೂಜ್ಯ ದಾರ್ಶನಿಕ ಕುರಿಯಾಕೋಸ್ ಎಲಿಯಾಸ್ ಚವರ ಇಲ್ಲಿ ವಾಸಿಸುತ್ತಿದ್ದ. ಕುರಿಯಾಕೋಸ್ ಎಲಿಯಾಸ್ ಚವರ ಸಿರೊ ಮಲಬಾರ್ ಕ್ಯಾಥೊಲಿಕ್ ಚರ್ಚ್ನ ಪುರುಷರ ಮೊದಲ ಸಮುದಾಯಕ್ಕೆ ನಾಂದಿ ಹಾಡಿದವರು. ಅವರು ವಾಸಿಸುತ್ತಿದ್ದ ಮನೆಗೆ ಈಗ ಗೌರವದ ಸ್ಥಾನ. ಸುಮಾರು ಮೂರು ಶತಮಾನಗಳಷ್ಟು ಹಳೆಯ ಕಟ್ಟಡ ಇದು. ಪ್ರಾರ್ಥನೆ ಮತ್ತು ವಿಶ್ರಾಂತಿ ಮತ್ತು ಪ್ರಶಾಂತತೆ ಆಧ್ಯಾತ್ಮಿಕತೆಯ ಪರಾಕಾಷ್ಠೆಯನ್ನು ಅನುಭವಿಸುವುದಕ್ಕಗಿ ಈ ಕಟ್ಟಡ ಈಗ ಬಳಕೆಯಾಗುತ್ತದೆ. ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಹಳೆಯ ಸಾಮಗ್ರಿಗಳನ್ನೂ ಇಲ್ಲಿ ಕಾಣಬಹುದಾಗಿದೆ.
ಅಲೆಪ್ಪಿ ನಗರದಿಂದ ಈಪ್ರದೇಶ ಕೇವಲ ಆರು ಕಿಲೋಮೀಟರ್ ಅಂತರದಲ್ಲಿದೆ. ಏಕಾಂತ ಹಾಗೂ ಆಧ್ಯಾತ್ಮಿಕ ಸ್ಪೂರ್ತಿಯನ್ನು ಬಯಸುವವರು ಇಲಲಿಗೆ ಆಗಮಿಸಬಹುದು. ನಗರದ ಜಂಗುಳಿ, ಗದ್ದಲಗಳಿಂದ ಮುಕತಿ ಪಡೆಯಲು ಬಯಸುತ್ತಿರುವವರ ಪಾಲಿಗೆ ಇದು ಹೇಳಿ ಮಾಡಿಸಿದ ಪ್ರಶಾಂತ ಸ್ಥಳ ಇದು.