ಮೌಲಾನ ಆಜಾದ್ ಗ್ರಂಥಾಲಯವು ಒಂದು ವಿಶಿಷ್ಟವಾದ ಗ್ರಂಥಾಲಯ. ಇದು ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯದ ಮುಖ್ಯ ಗ್ರಂಥಾಲಯ. ಇದರಲ್ಲಿ 80 ವಿವಿಧ ವಿಭಾಗಗಳಿಗೆ ಸೇರಿದ ಗ್ರಂಥಾಲಯವು ವಿವಿಧ ಮಹಡಿಗಳಲ್ಲಿದೆ. ಇದು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಬಹಳ ಉಪಯೋಗಿಯಾದದ್ದು.
ಇದು ಭಾರತದಲ್ಲಿನ ಅತಿ ದೊಡ್ಡ ಮತ್ತು ಏಷ್ಯಾದಲ್ಲಿನ ಎರಡನೇ ಅತಿ ದೊಡ್ಡ ಗ್ರಂಥಾಲಯ. ಈ ಗ್ರಂಥಾಲಯದಲ್ಲಿನ ಪುಸ್ತಕಗಳು ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಬೆಳಕನ್ನು ಚೆಲ್ಲುತ್ತವೆ. ಇದೊಂದು ಮುಸ್ಲಿಂ ಶೈಲಿಯ ಕಟ್ಟಡವಾಗಿದ್ದು ಸುಂದರ ಹುಲ್ಲುಗಾವಲು ಮತ್ತು ಉದ್ಯಾನವನಗಳನ್ನು ಒಳಗೊಂಡಿದೆ.


Click it and Unblock the Notifications