Search
  • Follow NativePlanet
Share
ಮುಖಪುಟ » ಸ್ಥಳಗಳು» ಆಲಂಗುಡಿ

ಆಲಂಗುಡಿ ಪ್ರವಾಸೋದ್ಯಮ  - ನವಗ್ರಹಗಳಲ್ಲಿ ಒಂದಾದ ಗುರು ಗ್ರಹದ ದೇವಸ್ಥಾನ

5

ತಮಿಳುನಾಡು ರಾಜ್ಯದ ತಿರುಯರುರ್ ಜಿಲ್ಲೆಯಲ್ಲಿನ ಆಲಂಗುಡಿ ಎಂಬ ಸುಂದರವಾದ ಹಳ್ಳಿಯಲ್ಲಿ ಈ ದೇವಸ್ಥಾನವಿದೆ. ಈ ಧಾರ್ಮಿಕ ಕ್ಷೇತ್ರವು ಮರ್ನ್ನಾಗುಡಿ ಯ ಸಮೀಪವಿರುವ ಕುಂಬಕೋಣಂನಿಂದ ಸುಮರು 17 ಕಿ.ಮೀ ದೂರವಿದೆ. ಆಲಂಗುಡಿಯ ಸಮೀಪದಲ್ಲಿರುವ ಪ್ರಮುಖ ನಗರ ಕುಂಬಕೋಣಂ. ಈ ಕ್ಷೇತ್ರದಲ್ಲಿ ನವಗ್ರಹಗಳಲ್ಲಿ ಒಂದಾದ ಗುರುಗ್ರಹಕ್ಕೆ ಸಮರ್ಪಿತವಾದ ದೇವಸ್ಥಾನವಿದೆ.    

ಶ್ರೀ ಅಬಸ್ತ್ಯೆಶ್ವರರ್ ಸ್ವಾಮಿ ದೇವಸ್ಥಾನವು ಅಲಂಗುಡಿಯ ಪ್ರಸಿದ್ದವಾದ ದೇವಸ್ಥಾನ. ಭಕ್ತಾದಿಗಳು ಈ ದೇವಸ್ಥಾನಕ್ಕೆ ಕುಂಬಕೋಣಂ ಅಥವಾ ನೀಡಮಂಗಳಂ ನಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದು.

ಆಲಂಗುಡಿಯ ಇತಿಹಾಸ:

ಪರಮೇಶ್ವರನ ಮತ್ತೊಂದು ರೂಪವಾದ ಅಲಂಗುಡಿಯ ಶ್ರೀ ಅಬಸ್ತ್ಯೆಶ್ವರರ್ ಸ್ವಾಮಿ ಇಲ್ಲಿನ ಮೂಲ ದೇವರು ಹಾಗು ತಾಯಿ ಪಾರ್ವತಿಯನ್ನು ಇಲ್ಲಿ ಉಮೈ ಅಮ್ಮೈ ಯೆಂದು ಪೂಜಿಸುತ್ತಾರೆ.

ಒಂದಾನೊಂದು ಕಾಲದಲ್ಲಿ ಅಸುರರು ಮತ್ತು ದೇವತೆಗಳು ಸಮುದ್ರಮಂಥನ (ಹಾಲ್ಗಡಲು) ಮಾಡಲು ಪ್ರಯತ್ನಿಸಿದಾಗ, ವಾಸುಕಿ ಯನ್ನು ಹಗ್ಗವನ್ನಾಗಿಯೂ, ಮಂದಾರ ಪರ್ವತವನ್ನು ಕಡಗೋಲಾಗಿಯೂ ಉಪೊಯೊಗಿಸಿಕೊಂಡರು. ಆಗ ವಾಸುಕಿಯು ಮಂಥನದ ಒತ್ತಡ ತಾಳಲಾರದೆ ತನ್ನಲ್ಲಿದ್ದ ವಿಷವನ್ನು ಕಕ್ಕಿದಾಗ ಪರಮೇಶ್ವರನು ಲೋಕವನ್ನು ರಕ್ಷಿಸುವ ಸಲುವಾಗಿ ವಿಷವನ್ನು ಕುಡಿದನು. ಹಾಗಾಗಿ ಭಕ್ತಾದಿಗಳು ಪ್ರೀತಿಯಿಂದ ಪರಮೇಶ್ವರನನ್ನು "ಅಬಸ್ತ್ಯೆಶ್ವರರ್" ಅಂದರೆ "ರಕ್ಷಕ" ನೆಂದು ಪೂಜಿಸುತ್ತಾರೆ ಮತ್ತು ಈ ಕ್ಷೇತ್ರವು "ಆಲಂಗುಡಿ" ಯೆಂದು ಪ್ರಸಿದ್ದಿ ಹೊಂದಿತು.

ಶಿವ/ಪರಮೇಶ್ವರನನ್ನು ಪೂಜಿಸುವುದಲ್ಲದೆ ಭಕ್ತಾದಿಗಳು ತಮ್ಮ ಗ್ರಹಗತಿಗಳನ್ನು ಸರಿಪಡಿಸಿಕೊಳ್ಳಲು ಅಲಂಗುಡಿಯ ಸುತ್ತಮುತ್ತಲಿನಿಂದ ಬಂದು ಬ್ರುಹಸ್ಪತಿ ಅಥವ ಗುರುವನ್ನು ಪೂಜಿಸುತ್ತಾರೆ. ಅದಲ್ಲದೆ, ಗುರುವು ಪ್ರತೀ ವರ್ಷ ತನ್ನ ಪಥವನ್ನು ಬದಲಿಸಿದಾಗ ಆಗುವ ದುಷ್ಪರಿಣಾಮಗಳನ್ನು ಹೊಗಲಾಡಿಸಿ ಹಾಗು ಆತನನ್ನು ಸಂತುಷ್ಟಗೊಳಿಸಲು ಭಕ್ತಾದಿಗಳು ತಂಡೋಪತಂಡವಾಗಿ ಆಗಮಿಸುತ್ತಾರೆ.

ಆಲಂಗುಡಿಯ ಸುತ್ತಮುತ್ತಲಿನ ದೇವಸ್ಥಾನಗಳು ಹಾಗು ಪ್ರೇಕ್ಷಣೀಯ ಸ್ಥಳಗಳು:

ಉಳಿದ 8 ನವಗ್ರಹ ಕ್ಷೇತಗಳು ಅಥವಾ ದೇವಸ್ಥಾನಗಳು ಇಂತಿವೆ:

ತಿರುನಲ್ಲಾರ್ (ಶನಿಶ್ಚರ), ಕಂಜನೂರ್ (ಶುಕ್ರ ಗ್ರಹ), ಸೂರ್ಯ ದೇವಸ್ಥಾನ (ಸೂರ್ಯ ದೇವ), ತಿರುವೆಂಕಾಡು (ಬುಧ ಗ್ರಹ), ತಿರುನಾಗೆಶ್ವರಂ (ರಾಹು ಗ್ರಹ), ತಿಂಗಳೂರ್ (ಚಂದ್ರ ಗ್ರಹ), ಕೀಳಾಪೆರುಂಪಲ್ಲಂ (ಕೇತು ಗ್ರಹ). ಈ ಎಲ್ಲಾ ಕ್ಷೇತ್ರಗಳು ಆಲಂಗುಡಿಯ ಸಮೀಪದಲ್ಲಿವೆ ಹಾಗು ಆಲಂಗುಡಿ ಕ್ಷೇತ್ರವು ಗುರು ಗ್ರಹಕ್ಕೆಂದೇ ನಿರ್ದೇಶಿಸಲ್ಪಟ್ಟ ಕ್ಷೇತ್ರ.

ಆಲಂಗುಡಿಯನ್ನು ತಲಪುವ ಬಗೆ:

ಕುಂಬಕೊಣಂ ರೈಲು ನಿಲ್ದಾಣವು ಮುಖ್ಯ ನಿಲ್ದಾಣವಾಗಿದ್ದು, ನಿಡಮಂಗಲಂ ರೈಲು ನಿಲ್ದಾಣವು 7 ಕಿ.ಮಿ. ದೂರದಲ್ಲಿದೆ. ಭಕ್ತಾದಿಗಳು ಈ ದೇವಸ್ಥಾನಕ್ಕೆ ಕುಂಬಕೊಣಂ ಅಥವಾ ನಿಡಮಂಗಲಂ ನಿಂದ ಬಸ್ ಅಥವಾ ಟ್ಯಾಕ್ಸಿಯ ಮೂಲಕವೂ ತಲುಪಬಹುದು.

ಆಲಂಗುಡಿಯ ಹವಾಮಾನ:

ಆಲಂಗುಡಿಯ ವಾತಾವರಣ ಬೆಚ್ಚನೆಯ ವಾತಾವರಣ.

ಆಲಂಗುಡಿ ಪ್ರಸಿದ್ಧವಾಗಿದೆ

ಆಲಂಗುಡಿ ಹವಾಮಾನ

ಉತ್ತಮ ಸಮಯ ಆಲಂಗುಡಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಆಲಂಗುಡಿ

  • ರಸ್ತೆಯ ಮೂಲಕ
    ಆಲಂಗುಡಿಯಲ್ಲಿರುವ ಮರ್ನ್ನಾಗುಡಿಗೆ ಕುಂಬಕೋಣಂನಿಂದ ಬಹಳಷ್ಟು ಬಸ್ಸುಗಳಿವೆ. ಕುಂಬಕೋಣಂನಿಂದ ಟ್ಯಾಕ್ಸಿಯಲ್ಲೂ ಸಹ ದೊರೆಯುತ್ತವೆ. ತಮಿಳುನಾಡಿನ ಪ್ರಮುಖ ನಗರಗಳಿಂದ ಕುಂಬಕೋಣಂಗೆ, ತಮಿಳುನಾಡು ರಾಜ್ಯ ಸಾರಿಗೆ ನಿಗಮದ ಬಸ್ಸುಗಳು ಹೋಗುತ್ತವೆ. ಯಾತ್ರಿಕರು ಚಿದಂಬರಂ, ತಿರುಚ್ಚಿ ಮತ್ತು ಚೆನ್ನೈ ನಿಂದ ಕುಂಬಕೋಣಂಗೆ ಬಸ್ಸುಗಳಲ್ಲಿಯೂ ಸಹ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಆಲಂಗುಡಿಗೆ 7 ಕಿ.ಮೀ. ದೂರದಲ್ಲಿರುವ ನಿಡಮಂಗಲಮ್ ರೈಲು ನಿಲ್ದಾಣವೆ ಸಮೀಪವಿರುವ ರೈಲು ನಿಲ್ದಾಣ. ಇದಲ್ಲದೆ ಕುಂಬಕೋಣಂ ನಗರದಲ್ಲಿ ರೈಲು ನಿಲ್ದಾಣವು ಸಹ ಇದೆ. ಬೆಂಗಳೂರು, ಚೆನ್ನೈ ಮತ್ಥು ತಮಿಳುನಾಡುವಿನ ಪ್ರಮುಖ ನಗರಗಳಿಂದ ಕುಂಬಕೋಣಂ ಗೆ ರೈಲು ಮಾರ್ಗಗಳಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ತಿರುಚಿರಾಪಳ್ಳಿ ವಿಮಾನ ನಿಲ್ದಾಣವು ಕುಂಬಕೋಣಮ್ ನ ಸಮೀಪದಲ್ಲಿದೆ. ಈ ವಿಮಾನ ನಿಲ್ದಾಣವು ಕುಂಬಕೋಣಂ ಇಂದ ಸುಮಾರು 87 ಕಿ.ಮೀ. ದೂರದಲ್ಲಿದೆ. ಆಲಂಗುಡಿಗೆ ಬರುವ ಯಾತ್ರಿಕರು ತಿರುಚಿರಾಪಳ್ಳಿಯ ವಿಮಾನ ನಿಲ್ದಾಣದಲ್ಲಿ ಇಳಿದು, ಬಸ್ ಅಥವಾ ಟ್ಯಾಕ್ಸಿಯ ಮೂಲಕ ಕುಂಬಕೋಣಂ ಗೆ ಬಂದು ನಂತರ ಆಲಂಗುಡಿಯನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu