Search
  • Follow NativePlanet
Share
ಮುಖಪುಟ » ಸ್ಥಳಗಳು » ಆಲಂಗುಡಿ » ಆಕರ್ಷಣೆಗಳು » ಶ್ರೀ ಅಬಸ್ತ್ಯೇಶ್ವರರ್ ಸ್ವಾಮಿಯವರ ದೇವಸ್ಥಾನ

ಶ್ರೀ ಅಬಸ್ತ್ಯೇಶ್ವರರ್ ಸ್ವಾಮಿಯವರ ದೇವಸ್ಥಾನ, ಆಲಂಗುಡಿ

1

ಈ ಶ್ರೀ ಅಬಸ್ತ್ಯೇಶ್ವರರ್ ಸ್ವಾಮಿಯ ದೇವಸ್ಥಾನದಲ್ಲಿ ಶಿವನು ಮೂಲ ದೇವರಾಗಿ ಪೂಜಿಸಲ್ಪಡುತ್ತಿದ್ದಾನೆ. ಶಿವನು ಇಲ್ಲಿ ಲಿಂಗದ ರೂಪದಲ್ಲಿದ್ದು "ಸ್ವಯಂಭು" ಎಂದು ಕರೆಯಲ್ಪಡುತ್ತಾನೆ. ಇಲ್ಲಿ ಗಣೇಶನ ದೇವಸ್ಥಾನವಿದ್ದು ಅವನು "ಕಳಂಗಮರ್ ಕತ ವಿನಾಯಗರ್" ಎಂದು ಆರಾದಿಸಲ್ಪಡುತ್ತಾನೆ ಮತ್ತು ಗುರು ಬ್ರುಹಸ್ಪತಿಯು ದಕ್ಷಿಣಾಮೂರ್ತಿ ಎಂದೂ ಕರೆಯಲ್ಪಡುತ್ತಿದ್ದಾನೆ.

ಪ್ರತೀ ವರ್ಷ ಗುರು ಬ್ರುಹಸ್ಪತಿಯು ತನ್ನ ಪಥವನ್ನು ಬದಲಿಸಿದಾಗ, ಭಕ್ತಾದಿಗಳು ಒಳ್ಳೆಯದನ್ನು ಬರಮಾಡಿಕೊಳ್ಳುತ್ತಾ ಮತ್ತು ಕೆಡಕುಗಳನ್ನು ನಿವಾರಿಸಿಕೊಳ್ಳುವ ಉದ್ದೇಶದಿಂದ ಈ ದೇವಸ್ಥಾನಕ್ಕೆ, ಗುರು ಬ್ರುಹಸ್ಪತಿಯನ್ನು ಪೂಜಿಸಲು ತಂಡೊಪತಂಡವಾಗಿ ಬರುತ್ತಾರೆ. ಈ ಸಂದರ್ಭದಲ್ಲಿ ಗುರು ಬ್ರುಹಸ್ಪತಿಗೆ ವಿಷೇಶ ಪೂಜೆಯನ್ನು ಸಲ್ಲಿಸುತ್ತಾರೆ. ಗುರು ಬ್ರುಹಸ್ಪತಿಯನ್ನು ಪೂಜಿಸಲು ಗುರುವಾರವು ಮಂಗಳಕರವಾಗಿದ್ದು, ಈ ದಿನ ವಿಷೇಶ ಪೂಜೆಗಳನ್ನು ಸಲ್ಲಿಸಲಾಗುತ್ತದೆ.

ಆಲಂಗುಡಿ ಎಂಬ ಹೆಸರು ಪುರಾಣದಿಂದ ಬಂದಿದೆ.  "ಹಾಲ್ಗಡಲ್" (ಸ್ವರ್ಗ ಸಮುದ್ರ) ವನ್ನು ಮಂಥಿಸಿದಾಗ, ವಾಸುಕಿಯಿಂದ ಬಂದ ವಿಷದ ಧಗೆಯನ್ನು ತಾಳಲಾರದೆ ದೇವತೆಗಳು ಶಿವನಿಗೆ ಮೊರೆ ಹೋದರು.  ಶಿವನು ಈ ವಿಷ (ಹಾಲಾಹಲ)ವನ್ನು ನುಂಗಿದನು. ಆದ್ದರಿಂದ ಈ ಕ್ಷೇತ್ರಕ್ಕೆ ಆಲಂಗುಡಿ ಎಂಬ ಹೆಸರು ಬಂದಿತು. ಮತ್ತು ಈ ಸ್ವಾಮಿಯನ್ನು ಅಬಸ್ತ್ಯೇಶ್ವರರ್ ಸ್ವಾಮಿ ಎಂದು ಕರೆಯಲಾಯಿತು. ಅಬಸ್ತ್ಯೇಶ್ವರರ್ ಎಂದರೆ ಕಷ್ಟಗಳಿಂದ ಕಾಪಾಡುವವನು ಎಂದರ್ಥ.

ದೇವತೆಗಳೂ ಸಹ ಗಜಮೂಕಾಸುರನಿಂದ ಕಷ್ಟಗಳನ್ನು ಅನುಭವಿಸಬೇಕಾಯಿತು. ಗಣೇಶನು ಈತನನ್ನು ಸೊಲಿಸಿ "ಕಲನ್ಗಮರ್ ಕಥ ವಿನಯಗರ್" ಎಂಬ ಹೆಸರನ್ನು ಪಡೆದ.

ತಾಯಿ ಪಾರ್ವತಿಯು ಇಲ್ಲಿ ತಪಸ್ಸು ಮಾಡಿ ಶಿವನನ್ನು ವರಿಸಿದಳು,  ಆದ್ದರಿಂದ ಈ ಕ್ಷೇತ್ರವು ತಿರುಮನ ಮಂಗಲಮ್ ಎಂದು ಪ್ರಸಿದ್ಧಿಯಾಗಿದೆ.

One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed