Search
  • Follow NativePlanet
Share
ಮುಖಪುಟ » ಸ್ಥಳಗಳು » ಆಲಂಗುಡಿ » ಹವಾಮಾನ

ಆಲಂಗುಡಿ ಹವಾಮಾನ

ಆಲಂಗುಡಿಗೆ ಬರಲು ಅಕ್ಟೋಬರ್ ತಿಂಗಳಿಂದ ಮಾರ್ಚ್ ತಿಂಗಳು ಬಹು ಸೂಕ್ತ ಸಮಯ. ಆಲಂಗುಡಿಗೆ ಬರುವ ಯಾತ್ರಿಕರು ಜೂನ್ ತಿಂಗಳಿಂದ ಸೆಪ್ಟಂಬರ್ ತಿಂಗಳವರೆಗೂ ಬಂದು ಖುಶಿ ಪಡಬಹುದು.

ಬೇಸಿಗೆಗಾಲ

ಆಲಂಗುಡಿಯಲ್ಲಿ ಬೇಸಿಗೆಯು ಮಾರ್ಚಿ ತಿಂಗಳಲ್ಲಿ ಶುರುವಾಗಿ ಮೇ ತಿಂಗಳ ಕೊನೆಯವರೆಗೂ ಇರುತ್ತದೆ. ಉಷ್ಣಾಂಶ ಹೆಚ್ಚಿದ್ದು 28 ಡಿಗ್ರಿ ಗಳಿಂದ 44 ಡಿಗ್ರಿ ಗಳವರೆಗೆ ಏರುತ್ತದೆ. ಆದ್ದರಿಂದ ಯಾತ್ರಿಕರು ಸಾಮಾನ್ಯವಾಗಿ ಬಿಸಿಲ ಧಗೆಯಿಂದ ತಪ್ಪಿಸಿಕೂಳ್ಳಲು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬರುವುದಿಲ್ಲ.

ಮಳೆಗಾಲ

ಮಳೆಗಾಲವು ಜೂನ್ ತಿಂಗಳಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳ ಕೊನೆಯವರೆಗೂ ಇರುತ್ತದೆ.  ಈ ಕಾಲದಲ್ಲಿ ಅಲ್ಪ ಪ್ರಮಾಣದ ಮಳೆ ಬರುತ್ತದೆ.  ಆಲಂಗುಡಿಯ ವಾತಾವರಣ ಈ ಸಮಯದಲ್ಲಿ ಸುಂದರವಾಗಿದ್ದು, ಜನರು ಬೇಸಿಗೆಯ ಧಗೆಯಿಂದ ಮುಕ್ತಿ ಹೊಂದುತ್ತಾರೆ.

ಚಳಿಗಾಲ

ಚಳಿಗಾಲವು ಡಿಸೆಂಬರ್ ನಿಂದ ಆರಂಭವಾಗಿ ಫೆಬ್ರುವರಿಯ ವರೆಗೂ ಇರುತ್ತದೆ. ಚಳಿಗಾಲವು ಆಹ್ಲಾದಕರವಾಗಿದ್ದು, 20 ಡಿಗ್ರೀಗಳಿಂದ 30 ಡಿಗ್ರೀಗಳವರೆಗೆ ಉಷ್ಣಾಂಶ ಇರುತ್ತದೆ.