Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಮರಿಯಮ್ ಝಮನಿ ಗೋರಿ

ಮರಿಯಮ್ ಝಮನಿ ಗೋರಿ, ಆಗ್ರಾ

1

ಮರಿಯಮ್ ಝಮನಿಯು ಅಜ್ಮೀರದ ರಾಜ ಬರ್ಮಲ್ ಕಛ್ಛ್ ವಾಹನ ಮಗಳು. ಈಕೆಯು ಅಕ್ಬರನನ್ನು ವಿವಾಹವಾದ ನಂತರ ಮರಿಯಮ್ ಝಮನಿ ಎಂಬ ಬಿರುದನ್ನು ಸಂಪಾದಿಸಿದಳು. ಈ ಹೆಸರಿನ ಅರ್ಥವೆಂದರೆ ’ ಕ್ಷಮಯಾ ಧರಿತ್ರಿ’ ಎಂದಾಗುತ್ತದೆ. ಈಕೆಯು ಸಲೀಮ್ ಎಂಬ  ಗಂಡು ಮಗುವಿಗೆ ಜನ್ಮ ನೀಡಿದಳು. ಈತನು ನಂತರ ಜಹಂಗಿರ್ ಎಂಬ ಹೆಸರಿನಿಂದ ಖ್ಯಾತಿ ಪಡೆದನು.

1623ರಲ್ಲಿ  ಮರಿಯಮ್ ಝಮನಿ ಆಗ್ರಾದಲ್ಲಿ ಕೊನೆಯುಸಿರೆಳೆದಳು. ಆಕೆಯ ಮಗ ಜಹಂಗಿರ್ ತನ್ನ ತಾಯಿಯ ಸ್ಮರಣಾರ್ಥವಾಗಿ ಒಂದು ಗೋರಿಯನ್ನು ನಿರ್ಮಿಸಿದನು. ಇದು ಸಿಕಂದರದಲ್ಲಿರುವ ಅಕ್ಬರನ ಸಮಾಧಿಗೆ ಸಮೀಪದಲ್ಲಿ ನೆಲೆಗೊಂಡಿದೆ. 1623 ರಿಂದ 1627ರ ನಡುವೆ ಅಂದರೆ ನಾಲ್ಕು ವರ್ಷದಲ್ಲಿ ಈ ಸಮಾಧಿ ಪೂರ್ಣಗೊಂಡಿತು.

ಚೌಕಾಕಾರದ ಈ ಗೋರಿಯು ಎರಡು ಪಥಗಳನ್ನು ಹೊಂದಿರುವ ಒಂದು ಸುಂದರವಾದ ಉದ್ಯಾನವನದಲ್ಲಿ ನೆಲೆಗೊಂಡಿದೆ. ದೊಡ್ಡ ಕಮಾನಿನಾಕಾರದ ರಚನೆಯ ಮೇಲೆ ಕಮಾನಿನಂತೆ ಬಾಗಿದ ಚಾವಣಿಯನ್ನು ನಾವಿಲ್ಲಿ ಕಾಣಬಹುದು. ಇಟ್ಟಿಗೆ ಮತ್ತು ಗಾರೆ ಹಾಗು ಗಚ್ಚಿನಿಂದ ಕೂಡಿದ ಈ ಗೋರಿಯು ತನ್ನ ನಾಲ್ಕು ಮೂಲೆಗಳಲ್ಲಿ ನಾಲ್ಕು ದೊಡ್ಡ ಛಾತ್ರಿಗಳನ್ನು ಅಥವಾ ಛತ್ರಗಳನ್ನು ಹೊಂದಿದೆ. ಇವುಗಳಿಗೆ ಆಭರಣಗಳನ್ನು ಜೋಡಿಸಲಾಗಿದೆ. ಈ ಗೋರಿಯು ಮೊಘಲರ ವಾಸ್ತುಶಿಲ್ಪ ಪರಂಪರೆಯಲ್ಲಿ ಮೂಡಿಬಂದ " ಗುಮ್ಮಟ ರಹಿತ ಗೋರಿ"ಗಳಿಗೆ ಅತ್ಯುತ್ತಮ ಉದಾಹರಣೆಯಾಗಿ ನಿಂತಿದೆ.

One Way
Return
From (Departure City)
To (Destination City)
Depart On
31 Jul,Fri
Return On
01 Aug,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
31 Jul,Fri
Check Out
01 Aug,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
31 Jul,Fri
Return On
01 Aug,Sat