Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಅಕ್ಬರ್ ಚಕ್ರವರ್ತಿಯ ಗೋರಿ

ಅಕ್ಬರ್ ಚಕ್ರವರ್ತಿಯ ಗೋರಿ, ಆಗ್ರಾ

4

ಆಗ್ರಾವು ವಿಶ್ವ ವಿಖ್ಯಾತ ತಾಜ್ ಮಹಲ್ ಜೊತೆಗೆ ಮೊಘಲ್ ವಾಸ್ತುಶಿಲ್ಪದ ಅದ್ಭುತ ಉದಾಹರಣೆಯಾಗಿ ನಿಂತಿರುವ ಅನೇಕ ಸ್ಮಾರಕಗಳ ಆಗರವಾಗಿದೆ.  ಅಂತಹ ಕಟ್ಟಡಗಳಲ್ಲಿ ಚಕ್ರವರ್ತಿ ಅಕ್ಬರನ ಗೋರಿ ಸಹ ಒಂದಾಗಿದೆ.119 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ನೆಲೆಗೊಂಡಿರುವ ಇದು ಆಗ್ರಾದಿಂದ 10 ಕಿ.ಮೀ ದೂರದಲ್ಲಿರುವ ಸಿಕಂದರ ಎಂಬ ಸ್ಥಳದಲ್ಲಿ ನೆಲೆಗೊಂಡಿದೆ. 1605ರಲ್ಲಿ ಅಕ್ಬರನಿಂದ ಪ್ರಾರಂಭಗೊಂಡ ಈ ಗೋರಿಯ ನಿರ್ಮಾಣ ಕಾರ್ಯವು 1613ರಲ್ಲಿ ಜಹಂಗಿರನಿಂದ ಪೂರ್ಣಗೊಳಿಸಲ್ಪಟ್ಟಿತು.

ಈ ಗೋರಿಯು ಅಮೃತಶಿಲೆ ಮತ್ತು ಮರಳುಗಲ್ಲಿನಿಂದ ನಿರ್ಮಾಣಗೊಂಡಿದೆ. ಇದು ಇಸ್ಲಾಂ ಮತ್ತು ಹಿಂದೂ ವಾಸ್ತು ಶಿಲ್ಪದ ಮಿಶ್ರ ಶೈಲಿಯ ಸುಂದರ ಉದಾಹರಣೆಯಾಗಿದೆ. ಅಮೃತಶಿಲೆಯ ರಚನೆಯಲ್ಲಿ ಕೆತ್ತನೆಗಳನ್ನು ಮತ್ತು ಅಮೂಲ್ಯವಾದ ಆಭರಣಗಳನ್ನು ಅಳವಡಿಸಿರುವುದನ್ನು ನಾವು ಕಾಣಬಹುದು.

ಗೋರಿಯ ನೆಲಮಹಡಿಯು ಸುಮಾರು 105 ಚ.ಮೀ ನಷ್ಟು ವಿಸ್ತಾರವಾಗಿದೆ. ಕೋನ ಮಾಪಕವನ್ನು ಬಳಸಿ ಇದರ ರಚನೆಯನ್ನು ಅತ್ಯಂತ ನಿಖರವಾಗಿ ಜೋಡಿಸಲಾಗಿದೆ. ಎತ್ತರವಾದ ಗೋಡೆಗಳು ಮತ್ತು ನಯನ ಮನೋಹರವಾದ ಉದ್ಯಾನವನದ ನಡುವಿನ ಪ್ರಶಾಂತವಾದ ಪರಿಸರದಲ್ಲಿ ಈ ಗೋರಿಯು ನೆಲೆಸಿದೆ.

ಈ ಗೋರಿಯ ಅತ್ಯಂತ ವಿಶಿಷ್ಟವಾದ ಆಕರ್ಷಣೀಂದರೆ ಇದರ ಪ್ರವೇಶ ದ್ವಾರ. ಬುಲಂದ್ ದರ್ವಾಜ ಅಥವಾ ಮನಮೋಹಕ ಪ್ರವೇಶ ದ್ವಾರವೆಂದು ಕರೆಯಲ್ಪಡುವ ಈ ದ್ವಾರ ಪ್ರವಾಸಿಗರ ಆಕರ್ಷಣೆಯಾಗಿದೆ. ಈ ದ್ವಾರದಿಂದ ಆರಂಭವಾಗುವ ವಿಶಾಲವಾದ ಹಾದಿಯು ಸೀದಾ ಗೋರಿಯನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu