Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ರಾಮ್ ಬಾಗ್

ರಾಮ್ ಬಾಗ್, ಆಗ್ರಾ

2

ಆರಾಮ್ ಬಾಗ್ ಅಥವಾ ಬಾಗ್ - ಇ- ಗುಲ್ ಅಫ್ಶನ್ ಎಂದು ಸಹ ಕರೆಯಲ್ಪಡುವ ರಾಮ್ ಬಾಗ್ ಅನ್ನು1528ರಲ್ಲಿ ಮೊಘಲರ ಪ್ರಥಮ ಸಾಮ್ರಾಟನಾದ ಬಾಬರ್ ನಿರ್ಮಿಸಿದನು. ಇದು ಚೀನಿ ಕಾ ರೌಜದಿಂದ 500 ಮೀಟರ್ ದೂರದಲ್ಲಿ ಮತ್ತು ಇತಿಮದ್ ಉದು ದೌಲಾಹ್ ಗೋರಿಯಿಂದ 3 ಕಿ.ಮೀ ಹಾಗು ತಾಜ್ ಮಹಲಿನಿಂದ ಐದು ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.

ವಿಸ್ತಾರವಾಗಿ ಹರಡಿಕೊಂಡಿರುವ ನಯನ ಮನೋಹರವಾದ ಈ ಉದ್ಯಾನವನವು ನಾಲ್ಕು ಹಂತಗಳಲ್ಲಿ ವಿಭಾಗಿಸಲ್ಪಟ್ಟಿದೆ. ಇಲ್ಲಿ ಕಲ್ಲು ಹಾಸುಗಳನ್ನು ಹಾಸಿರುವ ಕಾಲು ಹಾದಿಗಳು ಮತ್ತು ಕಾಲುವೆಗಳನ್ನು ನಾವು ಕಾಣಬಹುದು. ಇದು ಇಸ್ಲಾಮಿನಲ್ಲಿ ಉಲ್ಲೇಖಿಸಲ್ಪಟ್ಟಿರುವ ಚಾರ್ ಬಾಗ್ ಅಥವಾ ಭೂಮಿಯ ಮೇಲಿನ ಸ್ವರ್ಗದ ಉದ್ಯಾನವನದ ಕಲ್ಪನೆಯ ಸೂಚಕವಾಗಿ ನಿರ್ಮಾಣಗೊಂಡಿದೆ.

ಯಮುನಾ ನದಿಯಿಂದ ನೀರನ್ನು ಇಲ್ಲಿಗೆ ಕಾಲುವೆಗಳ ಮೂಲಕ ಹಾಯಿಸಲಾಗುತ್ತಿತ್ತು. ಅದಕ್ಕಾಗಿ ಇಲ್ಲಿ ಮೂರು ಮಹಡಿಗಳನ್ನು ನಿರ್ಮಿಸಿ, ಅದರಲ್ಲಿ ಮೂರು ಕೃತಕ ಜಲಪಾತಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಎರಡು ಮೊಗಸಾಲೆಗಳಿದ್ದು, ಅವುಗಳು ಯಮುನಾ ನದಿಗೆ ಅಭಿಮುಖವಾಗಿ ನಿಂತಿವೆ. ಜೊತೆಗೆ ಇಲ್ಲಿನ ನೆಲ ಮಹಡಿ ಅಥವಾ ಟಹ್‍ಖಾನಗಳಲ್ಲಿ ರಾಜ ಮನೆತನದವರು ಬೇಸಿಗೆಯ ಬಿಸಿಲಿನಿಂದ ವಿಶ್ರಾಂತಿ ಪಡೆಯುತ್ತಿದ್ದರು.

ಈ ಉದ್ಯಾನವನವನ್ನು ತುಂಬಾ ಸೊಗಸಾಗಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ. ಇಲ್ಲಿನ ಕಾಲುವೆಗಳು ಮತ್ತು ಕಾರಂಜಿಗಳು ಕಣ್ಮನವನ್ನು ಸೂರೆಗೊಳ್ಳುತ್ತವೆ. ಸಾಮ್ರಾಟ ಜಹಂಗಿರನ ಪತ್ನಿ ಬೇಗಂ ನೂರ್ ಜಹಾನ್ ಇದನ್ನು ನವೀಕರಣಗೊಳಿಸಿದಳು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed