Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಮುಸಮ್ಮನ್ ಬುರ್ಜ್

ಮುಸಮ್ಮನ್ ಬುರ್ಜ್, ಆಗ್ರಾ

3

ಮುಸಮ್ಮನ್ ಬುರ್ಜ್ ಅಥವಾ ಗೋಪುರವನ್ನು ಸಮನ್ ಬುರ್ಜ್ ಅಥವಾ ಶಾ ಬುರ್ಜ್ ಎಂದು ಸಹ ಕರೆಯುತ್ತಾರೆ. ಈ ಕಟ್ಟಡವು ಆಗ್ರಾ ಕೋಟೆಯಲ್ಲಿರುವ ಮೊಘಲ್ ಚಕ್ರವರ್ತಿ ಶಹ ಜಹಾನನ ದೀವಾನ್- ಇ- ಖಾಸ್‍ಗೆ ಸಮೀಪದಲ್ಲಿ ನೆಲೆಗೊಂಡಿದೆ. ಹದಿನೇಳನೆಯ ಶತಮಾನದಲ್ಲಿ ನಿರ್ಮಾಣಗೊಂಡ ಈ ಅಷ್ಟ ಭುಜಾಕೃತಿಯ ಗೋಪುರವನ್ನು ಶಹ ಜಹಾನನು ತನ್ನ ಪ್ರೀತಿ ಪಾತ್ರ ಮಡದಿಯಾದ ಮುಮ್ತಾಜ್ ಮಹಲಳ ನೆನಪಿಗಾಗಿ ನಿರ್ಮಿಸಿದನು ಎಂದು ತಿಳಿದುಬಂದಿದೆ. ಈ ಕಟ್ಟಡದ ಮೇಲಿನಿಂದ ಪ್ರವಾಸಿಗರು ತಾಜ್ ಮಹಲಿನ ನಯನ ಮನೋಹರವಾದ ನೋಟವನ್ನು ಸವಿಯಬಹುದು.

ಬಹು ಅಂತಸ್ತಿನ ಈ ಗೋಪುರವನ್ನು ಹಲವಾರು ಅಮೂಲ್ಯ ಹರಳುಗಳಿಂದ ಅಲಂಕರಿಸಲಾಗಿದೆ. ಈ ಗೋಪುರವನ್ನು ಅತ್ಯುತ್ತಮ ದರ್ಜೆಯ ಅಮೃತ ಶಿಲೆಗಳಿಂದ ನಿರ್ಮಿಸಲಾಗಿದೆ. ಇಲ್ಲಿ ಕೊರೆಯಲಾಗಿರುವ ಗವಾಕ್ಷಿಗಳ ಮೂಲಕ ರಾಜ ಮನೆತನದ ಸ್ತ್ರೀಯರು ಹೊರಗೆ ನಡೆಯುವ ಚಟುವಟಿಕೆಗಳನ್ನು, ಏಕಾಂತದಲ್ಲಿ ವೀಕ್ಷಿಸಿಬಹುದಾಗಿತ್ತು. ಈ ಹಜಾರದ ಛಾವಣಿಯಲ್ಲಿ ಅಮೃತ ಶಿಲೆಯಿಂದ ನಿರ್ಮಿಸಲಾಗಿರುವ ಗುಮ್ಮಟವನ್ನು ನಾವು ಕಾಣಬಹುದು. ಹಜಾರದ ಸುತ್ತಲೂ ಒಂದು ಚಾವಡಿಯಿದೆ. ಹಜಾರದ ಮಧ್ಯದಲ್ಲಿ ಅನುಪಮವಾದ ಕೆತ್ತನೆಗಳಿಂದ ಕೂಡಿದ ಒಂದು ನೀರಿನ ಚಿಲುಮೆಯಿದೆ.

ವಿಪರ್ಯಾಸದ ಸಂಗತಿಯೆಂದರೆ ಈ ಕಟ್ಟಡವು ಶಹ ಜಹಾನನ ಮಗನಾದ ರಾಜ ಕುಮಾರ ಔರಂಗಜೇಬನು, ಶಹ ಜಹಾನ್ ಮತ್ತು ಆತನ ಮಗಳಾದ ಜಹನಾರ ಬೇಗಂರವರನ್ನು ಬಂಧನದಲ್ಲಿಟ್ಟಾಗ ಅವರ ನಿವಾಸವಾಗಿತ್ತು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue