Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಜಸ್ವಂತ್ ಕಿ ಛತ್ರಿ

ಜಸ್ವಂತ್ ಕಿ ಛತ್ರಿ, ಆಗ್ರಾ

1

ಜಸ್ವಂತ್ ಕಿ ಛತ್ರಿಯು ಒಂದು ಗುಮ್ಮಟಾಕಾರದ ಸ್ಮಾರಕವಾಗಿದೆ. ಈ ಮೊಗಸಾಲೆಯು ಪ್ರಸಿದ್ಧ ರಾಜಸ್ತಾನಿ ವಾಸ್ತುಶಿಲ್ಪವನ್ನು ಹಿಂದೂ ಮತ್ತು ಮೊಘಲ್ ವಾಸ್ತುಶಿಲ್ಪದ ಲಕ್ಷಣಗಳ ಜೊತೆಗೂಡಿಸಿ ನಿರ್ಮಿಸಲಾಗಿರುವ ಒಂದು ಅದ್ಭುತ ಉದಾಹರಣೆಯಾಗಿದೆ.

ಈ ಕಟ್ಟಡಕ್ಕೆ ಇಮ್ಮಡಿ ರಾಜ ಜಸ್ವಂತ್ ಸಿಂಗ್‍ರವರ ನೆನಪಿಗಾಗಿ ಜಸ್ವಂತ್ ಕಿ ಛತ್ರಿ ಎಂದು ಹೆಸರಿಡಲಾಗಿದೆ. ಆದರೆ ಇದನ್ನು ರಾಜಸ್ಥಾನದ ಬುಂದಿಯ ಯುವರಾಣಿಯಾದ ಹಡರವರಿಗಾಗಿ ಅರ್ಪಣೆ ಮಾಡಲಾಗಿದೆ. ಈಕೆಯು ಅಮರ್ ಸಿಂಗ್ ರಾಥೋಡ್‍ರವರನ್ನು ವಿವಾಹವಾಗಿದ್ದರು. ಈತ ಆಗ್ರಾದ ಕೋಟೆಯಲ್ಲಿ 1644 ಜುಲೈ 25ರಂದು ನಿಧನ ಹೊಂದಿದನು.

ದಂತಕತೆಯ ಪ್ರಕಾರ ಅಮರ್ ಸಿಂಗ್‍ನ ಪಾರ್ಥೀವ ಶರೀರವನ್ನು ರಾಣಿ ಹದಗೆ ತೋರಿಸಿದಾಗ ಆಕೆಯು ತನ್ನ ಪತಿಯೊಂದಿಗೆ ಸಹಗಮನ ಮಾಡಿದಳಂತೆ.ಆಗ ಅಮರ್ ಸಿಂಗ್‍ನ ಕಿರಿಯ ಸಹೋದರನಾದ ರಾಜ ಜಸ್ವಂತ್ ಸಿಂಗ್ ಸಹಗಮನ ಮಾಡಿದ ರಜಪೂತ ರಾಣಿಯ ಸಲುವಾಗಿ ಈ ಛಾತ್ರಿಯನ್ನು ನಿರ್ಮಿಸಿದನು. ಆದಾಗಿಯೂ ಈ ಛಾತ್ರಿಯೂ ಮುಂದೆ ಇದನ್ನು ನಿರ್ಮಿಸಿದ ಜಸ್ವಂತ್ ಸಿಂಗನ ಹೆಸರಿನಲ್ಲಿಯೇ ಪ್ರಸಿದ್ಧಿ ಪಡೆಯಿತು.

1644 ರಿಂದ 58ರ ಸುಮಾರಿಗೆ ನಿರ್ಮಿಸಲ್ಪಟ್ಟ ಈ ಸ್ಮಾರಕವು ಮೊಘಲರ ಕಾಲದಲ್ಲಿ ನಿರ್ಮಾಣಗೊಂಡ ಏಕೈಕ ಹಿಂದೂ ಸ್ಮಾರಕವಾಗಿದೆ. ಇದು ಯಮುನಾ ನದಿಯ ದಂಡೆಯ ಗುಂಟ ಇರುವ ರಾಜ್‍ವಾರ, ಬಲ್ಕೇಶ್ವರ್ ಪಕ್ಕದಲ್ಲಿಯೇ ನೆಲೆಗೊಂಡಿದೆ.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat