Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ದಯಾಳ್‍ಬಾಗ್

ದಯಾಳ್‍ಬಾಗ್, ಆಗ್ರಾ

2

ಸೋಮಿ ಬಾಗ್ ಎಂದು ಸಹ ಕರೆಯಲ್ಪಡುವ ದಯಾಳ್‍ಬಾಗ್ ರಾಧಾಸೋಮಿ ಧಾರ್ಮಿಕ ಪಂಥದ ಅನುಯಾಯಿಗಳ ಪ್ರಧಾನ ಕಛೇರಿಯಾಗಿದೆ. ದಯಾಳ್ ಬಾಗ್ ಹೆಸರೇ ಸೂಚಿಸುವಂತೆ ಕರುಣೆಯ ಉದ್ಯಾನವನವಾಗಿದೆ. ಇದನ್ನು ರಾಧಾಸೋಮಿ ಪಂಥದ ಐದನೆಯ ಗುರುವಾದ ಹುಜುರ್ ಸಾಹಬ್‍ಜಿ ಮಹಾರಾಜ್‍ರವರು 1915ನೇ ಇಸವಿಯ ಬಸಂತ್ ಪಂಚಮಿಯಂದು ಹಿಪ್ಪುನೇರಳೆ ಗಿಡವನ್ನು ನೆಡುವ ಮೂಲಕ ಸ್ಥಾಪಿಸಿದರು.

ಈ ನಯನ ಮನೋಹರವಾದ ಉದ್ಯಾನವನವು ಆಗ್ರಾನಗರದಿಂದ 15 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದಕ್ಕೆ ಸಮೀಪದಲ್ಲಿಯೇ ರಾಧಾ ಸೋಮಿ ಪಂಥದ ಅನುಯಾಯಿಗಳ ಕಾಲೋನಿಯಿದೆ. ಇಲ್ಲಿ ನಡೆಯುವ ಸತ್ಸಂಗಕ್ಕೆ ವರ್ಷಪೂರ್ತಿ ಭಕ್ತಾಧಿಗಳು ಆಗಮಿಸಿ ಪಾಲ್ಗೋಳ್ಳುತ್ತಿರುತ್ತಾರೆ.

ಪ್ರಸ್ತುತ ಇರುವ ಕಾಲೋನಿಯು ಮೊದಲು ಮರಳು ದಿಬ್ಬಗಳಿಂದ ಕೂಡಿತ್ತು. ಆದರೆ ರಾಧಾಸೋಮಿ ಪಂಥದ ಅನುಯಾಯಿಗಳ ನಿರಂತರ ಶ್ರಮ ಮತ್ತು ಪ್ರಯತ್ನದ ಫಲವಾಗಿ ನಾವಿಂದು ಹಚ್ಚ ಹಸಿರಿನ ಉದ್ಯಾನವನವನ್ನು ನೋಡಬಹುದು. ಈ ಉದ್ಯಾನವನವು ಸುಮಾರು 1200 ಎಕರೆಯಷ್ಟು ವಿಸ್ತಾರವನ್ನು ಹೊಂದಿದೆ.

ಈ ಕಾಲೋನಿಯಲ್ಲಿ ಒಂದು ಆಕರ್ಷಕವಾದ ದೇವಾಲಯವನ್ನು ನಾವು ಕಾಣಬಹುದು. ಹಿಂದೂ ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯವು 110 ಅಡಿ ಎತ್ತರವಿದೆ. ದಯಾಳ್ ಬಾಗ್ ಜನಾಕರ್ಷಣೆಯ ದೃಷ್ಟಿಯಿಂದ ತಾಜ್ ಮಹಲಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿದೆ.

One Way
Return
From (Departure City)
To (Destination City)
Depart On
18 Aug,Tue
Return On
19 Aug,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Aug,Tue
Check Out
19 Aug,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Aug,Tue
Return On
19 Aug,Wed