Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಆಗ್ರಾ ಕೋಟೆ

ಆಗ್ರಾ ಕೋಟೆ, ಆಗ್ರಾ

10

ಆಗ್ರಾ ಕೋಟೆಯನ್ನು ಒಮ್ಮೊಮ್ಮೆ ಕೆಂಪು ಕೋಟೆ ಎಂದು ಸಹ ಕರೆಯುತ್ತಾರೆ. ಇದು ದೆಹಲಿಯಲ್ಲಿನ ಕೆಂಪು ಕೋಟೆಗೆ ಪೂರ್ವಗಾಮಿಯಾಗಿ ನಿರ್ಮಾಣಗೊಂಡ ಕೋಟೆಯಾಗಿದೆ. ವಾಸ್ತುಶಿಲ್ಪದ ದೃಷ್ಟಿಯಿಂದ ಮತ್ತು ಸಾಂಕೇತಿಕವಾಗಿ, ವಿನ್ಯಾಸ ದೃಷ್ಟಿಯಿಂದ ಮತ್ತು ಕೆಂಪು ಬಣ್ಣ ಸೇರಿದಂತೆ ಎಲ್ಲದರಲ್ಲು ಮುಂಚೂಣಿಯಲ್ಲಿ ನಿಲ್ಲುವಂತಹ ಕೋಟೆಯಾಗಿದೆ. ಆಗ್ರಾಕೋಟೆ ಮತ್ತು ಕೆಂಪು ಕೋಟೆ ಎರಡೂ ಕೆಂಪು ಮರಳುಗಲ್ಲಿನಿಂದ ನಿರ್ಮಾಣಗೊಂಡಿವೆ.

ಈ ಕಟ್ಟಡವನ್ನು ನೋಡಿದರೆ ವೀಕ್ಷಕರಿಗೆ ದೆಹಲಿಯ ಕೆಂಪುಕೋಟೆ ನೆನಪಿಗೆ ಬಂದೆ ಬರುತ್ತದೆ. ಇದು ಆಗ್ರಾದ ವಿಶ್ವ ಪಾರಂಪರಿಕ ತಾಣವಾಗಿದೆ. ಇದನ್ನು 1565ರಲ್ಲಿ ಅಕ್ಬರನು ನಿರ್ಮಿಸಿದನು. ಈ ಕೋಟೆಯ ಪ್ರವೇಶ ದ್ವಾರದಲ್ಲಿ ಒಂದು ಶಿಲಾಶಾಸನವಿದೆ. ಅದರ ಪ್ರಕಾರ ಈ ಕೋಟೆಯನ್ನು ಕ್ರಿ.ಶ.1000ಕ್ಕಿಂತ ಮೊದಲೇ ನಿರ್ಮಾಣ ಮಾಡಲಾಯಿತಂತೆ. ಅದನ್ನು ಅಕ್ಬರ್ ನವೀಕರಣ ಮಾಡಿದ ಅಷ್ಟೇ ಎಂದು ಹೇಳಲಾಗುತ್ತದೆ.

ನಂತರ ಶಹ ಜಹಾನ್ ಸಹ ಇದಕ್ಕೆ ಮತ್ತಷ್ಟು ಅಂದ ತರುವ ಪ್ರಯತ್ನ ಮಾಡಿದನು. ಆತನು ಈ ಕೋಟೆಯಲ್ಲಿ ಅಮೃತ ಶಿಲೆಯನ್ನು ಅಳವಡಿಸಿ ಒಳಾಂಗಣದ ಸೊಬಗನ್ನು ಹೆಚ್ಚಿಸಿದನು. ಯಮುನಾ ನದಿಯ ಮುಂಭಾಗದಲ್ಲಿ ನೆಲೆಗೊಂಡಿರುವ ಈ ಕೋಟೆಯು ಅರ್ಧ ಚಂದ್ರಾಕೃತಿಯಲ್ಲಿದೆ. ಈ ಕೋಟೆಯು ಹೊರ ಗೋಡೆಗಳನ್ನು ಮತ್ತು ಕಂದಕಗಳನ್ನು ಹಾಗು ಬುರುಜುಗಳನ್ನು ಒಳಗೊಂಡಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed