ಹಳೆಯ ಅಗರ್ತಲಾ ಎಂದು ಬಂಗಾಳಿ ಭಾಷೆಯಿಂದ ಭಾಷಾಂತರಿಸಲಾದ ಪುರಾತನ ಅಗರ್ತಲಾ, ಸಾಮಾನ್ಯವಾಗಿ ತ್ರಿಪುರ ರಾಜ್ಯದ ಎರಡನೇ ರಾಜಧಾನಿ ಎಂದೇ ಕರೆಯಲಾಗುತ್ತದೆ. ಪ್ರಸ್ತುತ ಅಗರ್ತಲಾದಿಂದ 7 ಕಿಲೋಮೀಟರ್ ದೂರದಲ್ಲಿರುವ ಪುರಾತನ ಅಗರ್ತಲಾ ಚತುರ್ದಶ ದೇವತಾ ಮಂದಿರಕ್ಕೆ ಪ್ರಸಿದ್ಧವಾಗಿದೆ.
ಚತುರ್ದಶ ದೇವತಾ ಮಂದಿರದಲ್ಲಿ ಹದಿನಾಲ್ಕು ದೇವರುಗಳಿಗೆ ಅರ್ಪಿತವಾದ ಮಂದಿರ. ಹದಿನಾಲ್ಕು ದೇವರುಗಳ ಮತ್ತು ದೇವತೆಗಳನ್ನು ಒಟ್ಟಿಗೆ ಚತುರ್ದಶ ದೇವತಾ ಎಂದು ಕರೆಯಲಾಗುತ್ತದೆ. ಈ ಮಂದಿರ ಗ್ರಾಮೀಣ ಬಂಗಾಳದ ಕಂಡುಬರುವ ಸ್ತೂಪವನ್ನು ಹೋಲುವ ಮನೆಯ ರಚನೆಯ ನಿರ್ಮಾಣವಾಗಿದೆ. ದೇವಾಲಯದ ವಾಸ್ತುಶಿಲ್ಪ ಬಂಕುರಾ ಶೈಲಿ ಮತ್ತು ಬೌದ್ಧ ಶೈಲಿಯ ಮಿಶ್ರಣವನ್ನು ಹೊಂದಿದೆ. ಈ ಮಂದಿರವನ್ನು ರಾಜ ಕೃಷ್ಣ ಮಾಣಿಕ್ಯ ದೆಬ್ರಮಾ/ದೆಬ್ರಹ್ಮಾ ನಿರ್ಮಿಸಿದನು. ಹದಿನಾಲ್ಕು ದೇವ ದೇವತೆಗಳೂ ಸ್ಥಳೀಯ ಕೊಕ್ ಬೊರೊಕ್ ಹೆಸರನ್ನು ಹೊಂದಿವೆ.
ಪ್ರತಿ ವರ್ಷ ತ್ರಿಪುರ ಮತ್ತು ದೇಶದ ಇತರ ಸ್ಥಳಗಳಿಂದ ಜನರು ಜುಲೈ ಅವಧಿಯಲ್ಲಿ ನಡೆಯುವ ಖರ್ಚಿ ಪೂಜೆ ಸಮಯದಲ್ಲಿ ಚತುರ್ದಶ ದೇವತಾ ಮಂದಿರಕ್ಕೆ ಭೇಟಿ ನೀಡುತ್ತಾರೆ. ಇದು ಹದಿನಾಲ್ಕು ದೇವ ದೇವತೆಗಳನ್ನು ಪೂಜಿಸುವ ವಾರಾವಧಿಯ ಪೂಜೆಯಾಗಿದೆ.