ತ್ರಿಚೆಂಡೆ ಮಂಗಳಂ ಮಹಾದೇವ ಮಂದಿರವು ಪೆರಿಂಗಂಡ ಗ್ರಾಮದಲ್ಲಿದೆ. ಅಡೂರ್ ನಿಂದ ಐದು ಕಿ.ಮೀ. ದೂರದಲ್ಲಿರುವ ಮಂದಿರವು ಇಲ್ಲಿನ ಪ್ರಮುಖ ಆಕರ್ಷಣೆ. ಶಿವ ದೇವರು ಮಂದಿರದ ಪೂಜ್ಯನೀಯ ದೇವರು. ಉತ್ಸವದ ವೇಳೆ ಸಾವಿರಾರು ಮಂದಿ ಭಕ್ತರು ಮತ್ತು ಪ್ರವಾಸಿಗರು ಮಂದಿರಕ್ಕೆ ಭೇಟಿ ನೀಡುತ್ತಾರೆ. ತ್ರಿಚೆಂಡೆ ಮಂಗಳಂ ಮಹಾದೇವ ಮಂದಿರದಲ್ಲಿ ಕೆಟ್ಟುಕಾಳ್ಚ ಉತ್ಸವ ಪ್ರಮುಖವಾದದ್ದು. ವಾರ್ಷಿಕವಾಗಿ ನಡೆಯಲಿರುವ ಉತ್ಸವದ ವೇಳೆ ಮಂದಿರದ ಸುತ್ತಮುತ್ತಲು ಶೃಂಗಾರ ಮತ್ತು ಪ್ರಾರ್ಥನೆ ವಿಶೇಷ ಮೆರಗನ್ನು ಉಂಟು ಮಾಡುತ್ತದೆ.
ಕೆಟ್ಟುಕಾಳ್ಚ ಬಣ್ಣ ಹಾಗೂ ಉತ್ಸವದಿಂದ ಪ್ರೇಕ್ಷಕರಿಗೆ ಒಂದು ವಿಶೇಷ ಅನುಭವವನ್ನು ನೀಡುತ್ತದೆ. ಕೆಟ್ಟುಕಾಳ್ಚ ಉತ್ಸವದ ಬಳಿಕ ನಡೆಯುವ ಮೆರವಣಿಗೆಯಲ್ಲಿ ನೂರಾರು ಮಂದಿ ಭಕ್ತರು ಭಾಗವಹಿಸುತ್ತಾರೆ. ಮೆರವಣಿಗೆಯಲ್ಲಿ ರಥ ಮತ್ತು ಗೂಳಿ(ಕಾಲಾ)ಯನ್ನು ಸ್ಥಳೀಯರು ತುಂಬಾ ಉತ್ಸದಿಂದ ಕೊಂಡೊಯ್ಯುತ್ತಾರೆ.


Click it and Unblock the Notifications