ಯಳಗಿರಿಯಲ್ಲಿ ನೀವು ಪಡೆಯುವ ಅತ್ಯಂತ ಅಪೂರ್ವವಾದ ಅನುಭವೆಂದರೆ ಚಾರಣ. ಇಲ್ಲಿ ಕಾಡಿನ ನಡುವೆ ಹಾದುಹೋಗುವ ಏಳು ಚಾರಣದ ಹಾದಿಗಳಿವೆ. ಇವುಗಳು ನಿಮ್ಮನ್ನು ಜಲಪಾತ, ಶಿಖರಗಳು, ಹಾಗೂ ಕಣಿವೆಗಳ ಬಳಿಗೆ ಕರೆದೊಯ್ಯುತ್ತವೆ. ಪುಂಗನೂರು ಕೆರೆಯಿಂದ ನಿಲವೂರು ಜಲಗಂಪರಿಗೆ ಇರುವ ಮಾರ್ಗ ಅತ್ಯಂತ ದೀರ್ಘವಾಗಿದ್ದು 14 ಕಿ.ಮೀ ದೂರವಿದೆ.
ಪುಂಗನೂರು ಕೆರೆಯಿಂದ ಸ್ವಾಮಿಮಲೈ ಬೆಟ್ಟಕ್ಕೆ ಇರುವ ಇಲ್ಲಿನ ಇನ್ನೊಂದು ಸುಂದರವಾದ ಮಾರ್ಗವಾಗಿದ್ದು ಸುಮಾರು 6 ಕಿ.ಮೀ ದೂರವಿದೆ. ಈ ಚಾರಣ ನಿಮ್ಮನ್ನು ಒಂದು ಶಿಖರಕ್ಕೆ ಕರೆದೊಯ್ಯುತ್ತದೆ ಅಲ್ಲಿಂದ ಎಲ್ಲಾ ಬೆಟ್ಟಗಳ ಅಭೂತಪೂರ್ವ ಸೊಬಗನ್ನು ನೀವು ಸವಿಯಬಹುದಾಗಿದೆ. ಇತರೆ ಮಾರ್ಗಗಳೆಂದರೆ ಮಂಗಲಂ ನಿಂದ ಸ್ವಾಮಿಮಲೈ ಇದು ಸುಮಾರು 2 ಕಿ.ಮೀ ಇದೆ.
ಮಾಹಿತಿ ಕೇಂದ್ರದಿಂದ ಕೂಸಿ ಕುಟ್ಟೈ ಗೆ ಇರುವ 1.5 ಕಿ.ಮೀ ಮಾರ್ಗ ಇನ್ನೊಂದು ಪ್ರಮುಖ ಮಾರ್ಗವಾಗಿದೆ. ಪುತೂರಿನಿಂದ ಪೆರುಮಾಡು ಜಲಪಾತಕ್ಕೆ ಇನ್ನೊಂದು ಚಾರಣಮಾರ್ಗವಿದೆ, ಇದು ಸುಮಾರು 3 ಕಿ.ಮೀ ದೂರವಿದೆ. ಬೋಟ್ ಹೌಸ್ ನಿಂದ ಪಿಲಿಚಾ ಕುಟ್ಟೈಗೆ ಇರುವ 3 ಕಿ.ಮೀ ಮಾರ್ಗ ಮಗದೊಂದು ಮಾರ್ಗವಾಗಿದೆ. ನಿಲವೂರಿನಿಂದ ಕರ್ಡಿಮುನಾಯಿಗೆ ಇರುವ 1.5 ಕಿ.ಮೀ ರಸ್ತೆ ಇನ್ನೊಂದು ಚಾರಣ ಮಾರ್ಗವಾಗಿದೆ. ಚಾರಣಕ್ಕಾಗಿ ಒಂದು ಇಡಿ ದಿನವನ್ನು ಮೀಸಲಿಟ್ಟರೆ ಸಂಪೂರ್ಣ ಆನಂದವನ್ನು ಅನುಭವಿಸಬಹುದಾಗಿದೆ.


Click it and Unblock the Notifications