Search
  • Follow NativePlanet
Share
ಮುಖಪುಟ » ಸ್ಥಳಗಳು » ಯಳಗಿರಿ » ಹವಾಮಾನ

ಯಳಗಿರಿ ಹವಾಮಾನ

ಎಳಗಿರಿಯಲ್ಲಿ ಹವಾಮಾನ  ವರ್ಷದ ಯಾವುದೇ ಸಮಯದಲ್ಲಿ ಭೇಟಿ ಮಾಡಬಹುದಾದಂತಹ ಮಧ್ಯಮ ಪ್ರಮಾಣದ ಹವಾಮಾನವನ್ನು ಹೊಂದಿದೆ. ಆದಾಗ್ಯೂ ಎಳಗಿರಿಗೆ ಭೇಟಿ ನೀಡಲು ಸೂಕ್ತವಾದ ಸಮಯವೆಂದರೆ ನವೆಂಬರ್ ನಿಂದ ಫೆಬ್ರವರಿ ತಿಂಗಳ ಚಳಿಗಾಲದ ಅವಧಿ. ಈ ಸಮಯದಲ್ಲಿ ಹವಾಮಾನ ತಂಪಾಗಿ ಮತ್ತು ಆಹ್ಲಾದಕರವಾಗಿರುತ್ತದೆ. ಮೇ ತಿಂಗಳಲ್ಲಿ ಆಚರಿಸಲಾಗುವ ಬೇಸಿಗೆ ಉತ್ಸವ ಭೇಟಿ ನೀಡಲು ಇದು ಉತ್ತಮವಾದ ಸಮಯ.

ಬೇಸಿಗೆಗಾಲ

ಯಳಗಿರಿಯು ವರ್ಷದ ಬಹುತೇಕ ಸಮಯ ಮಧ್ಯಮ ಹವಾಮಾನವನ್ನು ಹೊಂದಿರುತ್ತದೆ. ಬೇಸಿಗೆ ಕಾಲವು ಮಾರ್ಚ್ ತಿಂಗಳಲ್ಲಿ ಆರಂಭವಾಗಿ ಜೂನ್ ವರೆಗೆ ಮುಂದುವರಿಯುತ್ತದೆ. ತಾಪಮಾನ 18 ಡಿ.ಸೆ ನಿಂದ 34 ಡಿ ಸೆಲ್ಷಿಯಸ್ ನಷ್ಟಿರುತ್ತದೆ. ಮೇ ಮತ್ತು ಜೂನ್ ತಿಂಗಳಲ್ಲಿ ಆಚರಿಸಲಾಗುವ ಮೂರು ದಿನಗಳ ಬೇಸಿಗೆ ಉತ್ಸವ ಇಲ್ಲಿನ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಮಳೆಗಾಲ

ಯಳಗಿರಿ ಪ್ರದೇಶದಲ್ಲಿ ಜುಲೈನಿಂದ ಸೆಪ್ಟೆಂಬರ್ ತಿಂಗಳವರೆಗೆ ಮಳೆಯಾಗುತ್ತದೆ. ಇಲ್ಲಿ ಸುರಿಯುವ ಮಳೆ ತೀವ್ರವಾಗಿರುವುದಿಲ್ಲ. ಇಲ್ಲಿ ಸರಾಸರಿ ಮಳೆಯಾಗುತ್ತದೆ. ಆದರೆ ಮಳೆಗಾಲವು ಇಲ್ಲಿನ ಪ್ರದೇಶಗಳನ್ನು ನೋಡಲು ಮಾಡಬೇಕಾಗುವ ಚಾರಣಕ್ಕೆ ಉತ್ತಮ ಸಂಗಾತಿಯಲ್ಲದ್ದರಿಂದ ಮಳೆಗಾಲದಲ್ಲಿ ಯಳಗಿರಿ ಪ್ರವಾಸವನ್ನು ಕೈಗೊಳ್ಳದಿರುವುದೇ ಒಳಿತು.

ಚಳಿಗಾಲ

ಚಳಿಗಾಲದವು ಯಳಗಿರಿಯಲ್ಲಿ ಡಿಸೆಂಬರ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ ತನಕ ಮುಂದುವರಿಯುತ್ತದೆ. ಈ ಸಮಯದ ತಾಪಮಾನ 11 ಡಿ.ಸೆ ನಿಂದ 25 ಡಿ.ಸೆ ವರೆಗೆ ಏರುಪೇರಾಗುತ್ತಿರುತ್ತದೆ. ಚಳಿಗಾಲದಲ್ಲಿ  ಹವಾಮಾನ ತಂಪಾಗಿದ್ದು, ಹಿತಕರವಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಯಳಗಿರಿ ಪ್ರದೇಶದ ನೋಟಕ್ಕೆ ಮತ್ತು ಚಾರಣ ಮಾಡುವುದಕ್ಕೆ ಸೂಕ್ತವಾದ ಸಮಯವಾಗಿದೆ.