ಇದು ಪ್ರವಾಸಿಗಳ ಆಕರ್ಷಣೆಗೆಂದು ಇತ್ತೀಚೆಗೆ ಇಲ್ಲಿ ನಿರ್ಮಿಸಲಾದ ಒಂದು ಕಟ್ಟಡವಾಗಿದೆ. ಯಳಗಿರಿಯಿಂದ ಪೊನ್ನೇರಿ ದಾರಿಯ ಮಧ್ಯೆ ಇರುವ ಘಾಟ್ ರಸ್ತೆಯ ಆರಂಭದಲ್ಲಿ ಇದನ್ನು ಕಟ್ಟಲಾಗಿದೆ. 13 ನೇಯ ತಿರುವಿನ ಸಮೀಪದಲ್ಲಿ ಇದನ್ನು ಕಟ್ಟಲಾಗಿದೆ. ಸುಮಾರು 1002 ಮೀಟರ್ ಎತ್ತರದಲ್ಲಿ ಈ ವೀಕ್ಷಣಾಲಯ ಇದೆ. ಇಲ್ಲಿಂದ, ಬಯಲು ಪ್ರದೇಶ, ಕಣಿವೆ, ಜೊಲಾರ್ ಪೇಟ್ ಬಯಲುಗಳು ಹಾಗೂ ವನಿಯಾಂಬಾಡಿಗಳ ಅತ್ಯುತ್ತಮ ನೋಟಗಳು ಕಣ್ಣುಗಳಿಗೆ ಲಭಿಸುತ್ತದೆ.
ಇದನ್ನು ವಾರಾಂತ್ಯಗಳಲ್ಲಿ ಮಾತ್ರ ತೆರೆದಿಡುವ ಯೋಚನೆ ಇತ್ತಾದರೂ, ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಿರುವುದರಿಂದ ಇದು ಮುಚ್ಚಿರುವುದನ್ನು ನೋಡುವುದು ಅಪರೂಪವಾಗಿದೆ.


Click it and Unblock the Notifications