ಪುಂಗನೂರು ಕೆರೆ ಇಲ್ಲಿನ ಸೌಂದರ್ಯವನ್ನು ಹೆಚ್ಚಿಸಲು ಕೃತಕವಾಗಿ ನಿರ್ಮಿಸಲಾದ ಕೆರೆಯಾಗಿದೆ. ಪುಂಗನೂರು ಕೆರೆ ಇಲ್ಲಿನ ಅತ್ಯಂತ ಪ್ರಮುಖವಾದ ಪ್ರವಾಸಿ ಆಕರ್ಷಣೆಯಾಗಿದೆ. ಇದು 56.70 ಚದರ ಮೀಟರ್ ಗಳಷ್ಟು ವೀಸ್ತಾರವಾದ ಸ್ಥಳದಲ್ಲಿ ವ್ಯಾಪಿಸಿದೆ. ಇದು ಯಳಗಿರಿ ಬೆಟ್ಟಗಳ ಮಧ್ಯದಲ್ಲಿದೆ. ಇಲ್ಲಿ ಬೋಟಿಂಗ್ ಮಾಡಲು ಅವಕಾಶವಿದ್ದು, ಬಹಳ ಸುಂದರವಾದ ದೃಶ್ಯಾವಳಿಗಳನ್ನು ಒದಗಿಸುತ್ತದೆ. ಇದನ್ನು ಇಲ್ಲಿ ಪ್ರವಾಸೋದ್ಯಮ ಇಲಾಖೆಯವರು ಅರಂಭಿಸಿದ್ದಾರೆ.
ಇಲ್ಲಿ ಬೋಟಿಂಗ್ ಹಾಗೂ ರೋವಿಂಗ್ ಸೌಲಭ್ಯವಿದೆ. ಇದು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಮತ್ತಷ್ಟು ಸಮೀಪದಿಂದ ಸವಿಯಲು ಅನುವು ಮಾಡಿಕೊಡುತ್ತದೆ. ಇಲ್ಲೇ ಸಮೀಪದಲ್ಲಿ ಇರುವ ಉದ್ಯಾನವನವು ಸಂಜೆಯ ಹೊತ್ತು ಕುಳಿತು ವಿರಮಿಸಲು ಅತ್ಯಂತ ಸೂಕ್ತವಾದ ಜಾಗವಾಗಿದೆ. ಇಲ್ಲಿ ಒಂದು ಕಾರಂಜಿ ಹಾಗೂ ಜೊತೆಗೆ ಮಕ್ಕಳ ಉದ್ಯಾನವೂ ಇದೆ. ಇಲ್ಲಿ ಇರುವ ತೆರೆದ ಸ್ಥಳದಲ್ಲಿ ತಮ್ಮ ಆಹಾರಕ್ಕಾಗಿ ಬರುವ ಪಕ್ಷಿಗಳನ್ನು ಕಾಣಬಹುದಾಗಿದೆ.


Click it and Unblock the Notifications