ರಂಗಪನಿ ಹಳ್ಳಿಯು ಮೇಘಾಲಯದ ಪಶ್ಚಿಮ ಗರೊ ಬೆಟ್ಟಗಳಲ್ಲಿರುವ ಅತ್ಯಂತ ಸುಂದರವಾದ ಜೀವ ವೈವಿಧ್ಯದ ತಾಣವಾಗಿದೆ. ಇಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಸೇನಾಧಿಪತಿಯಾದ ಮೀರ್-ಜುಮ್ಲನ ಗೋರಿಯಿದೆ. ಮೀರ್-ಜುಮ್ಲ ಆಗ್ನೇಯ ಭಾರತದ ಪ್ರವಾಸ ಮಾಡಿ ಬರುವಾಗ ಮಲೇರಿಯಾ ರೋಗದಿಂದ ನಿಧನ ಹೊಂದಿದನು. ಇಲ್ಲಿನ ಮುಸ್ಲಿಂ ಸಂಘವು ಈತನ ಗೋರಿಯ ನಿರ್ವಹಣೆಯನ್ನು ನೋಡಿಕೊಂಡು ಬರುತ್ತಿದ್ದಾರೆ.
ರಂಗಪನಿಯು ಕೇವಲ ತನ್ನ ಐತಿಹಾಸಿಕ ಮಹತ್ವದಿಂದಾಗಿ ಗಮನ ಸೆಳೆಯುತ್ತಿಲ್ಲ, ಬದಲಿಗೆ ತನ್ನ ಪ್ರಾಕೃತಿಕ ಸೊಬಗಿನಿಂದ ಸಹ ಜನರನ್ನು ಆಕರ್ಷಿಸುತ್ತಿದೆ. ಪ್ರಶಾಂತವಾದ ಪರಿಸರವು, ಯಾವಾಗಲೂ ಬೀಸುವ ತಂಗಾಳಿಯಿಂದಾಗಿ ಎಂದೆಂದಿಗು ಆಹ್ಲಾದಕತೆಯನ್ನು ಚೆಲ್ಲುತ್ತ ಇಲ್ಲಿ ನೆಲೆಗೊಂಡಿದೆ.
ಇಲ್ಲಿ ಇರುವ ಹಚ್ಚ ಹಸಿರಿನ ಬೆಟ್ಟಗಳು ದೂರದಿಂದಲೇ ನೋಡುಗರನ್ನು ಕೈಬೀಸಿ ತನ್ನತ್ತ ಕರೆಯುತ್ತಿರುವಂತೆ ನಿಂತಿವೆ. ರಂಗಪನಿಯು ಟುರದಿಂದ 40 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಅಸ್ಸಾಂ ಗಡಿಯಲ್ಲಿರುವ ಮಂಕಚರ್ ಸಮೀಪದಲ್ಲಿ ನೆಲೆಗೊಂಡಿದೆ. ಟುರದಿಂದ ಇಲ್ಲಿಗೆ ಪ್ರವಾಸಿ ವಾಹನವನ್ನು ಮಾಡಿಕೊಂಡು ಬರುವುದು ಉತ್ತಮ.


Click it and Unblock the Notifications