ಕಾಟ ಬೀಲ್ ಎಂಬುದು ಒಂದು ದೊಡ್ಡದಾದ ಕೆರೆಯಾಗಿದ್ದು, ಸುತ್ತಲೂ ತಾಳೆ ಮರಗಳು ಹಾಗು ಗರೊ ಬೆಟ್ಟಗಳಿಂದ ಸುತ್ತುವರೆದಿದೆ. ಗರೊ ಬೆಟ್ಟಗಳು ಗಾಳ ಹಾಕಿ ಮೀನು ಹಿಡಿಯಲು ಮತ್ತು ವಿಹಾರಕ್ಕೆ ಅತ್ಯುತ್ತಮವಾದ ಸ್ಥಳವಾಗಿದೆ. ಈ ನಯನ ಮನೋಹರವಾದ ಕೊಳವು ನೊಗೊರ್ಪರ ಹಳ್ಳಿಯ ಬಳಿಯಲ್ಲಿ ನೆಲೆಗೊಂಡಿದ್ದು, ಟುರದಿಂದ 70 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಟುರ - ಗರೊಬಧ-ಅಂಪತಿಗಿರಿ-ಮಹೇಂದ್ರಗಂಜ್ ರಸ್ತೆಯಲ್ಲಿ ನೆಲೆಗೊಂಡಿದೆ. ದಂತ ಕತೆಗಳ ಪ್ರಕಾರ ಈ ಕೆರೆಯನ್ನು ಗರೊನ ರಾಜ ಲೆಂಗ್ಟರವರ ಅಪ್ಪಣೆಯಂತೆ ನಿರ್ಮಾಣ ಮಾಡಲಾಯಿತು ಎಂದು ಹೇಳಲಾಗುತ್ತದೆ.
ಸಾಂಪ್ರದಾಯಿಕವಾಗಿ ಕಾಟ ಬೀಲ್ ಎಂದರೆ ಅರ್ಥ ಹೀಗಿದೆ, "ಕಾಟ" - ಕತ್ತರಿಸಿದ ಮತ್ತು "ಬೀಲ್"- ಕೆರೆ ಎಂದಾಗುತ್ತದೆ. ವಿಹಾರಾರ್ಥಿಗಳು ಬೇಸಿಗೆಯಲ್ಲಿ ಇಲ್ಲಿಗೆ ತಂಡೋಪ ತಂಡವಾಗಿ ದಾಂಗುಡಿಯಿಡುತ್ತಾರೆ. ಸ್ವಚ್ಛವಾಗಿ ನಿಂತ ನೀರಿನಲ್ಲಿ ಆಕಾಶದ ನೀಲಿ ಬಣ್ಣವು ಪ್ರತಿಫಲನ ಹೊಂದುತ್ತದೆ. ಜೊತೆಗೆ ಆಕಾಶದಲ್ಲಿರುವ ಮೋಡಗಳು ಇದರಲ್ಲಿ ಪ್ರತಿಫಲಿಸಿ ಮೋಡಗಳು ಭೂಮಿಗೆ ಇಳಿದು ಬಂದವೇನೊ, ಎಂಬಂತೆ ಭಾಸವಾಗುತ್ತವೆ. ಈ ದೃಶ್ಯಾವಳಿಯನ್ನು ನೋಡಲು ಅತ್ಯಂತ ಸುಂದರವಾಗಿರುತ್ತದೆ.
ಕಾಟ ಬೀಲ್ ಸುಮಾರು ಒಂದು ಹೆಕ್ಟೇರ್ ನಷ್ಟು ವಿಸ್ತೀರ್ಣದ ಭೂಮಿಯನ್ನು ಆವರಿಸಿದೆ. ಇದರ ಸುತ್ತಲು ತಾಳೆಯ ತೋಟಗಳು ಕಂಡು ಬರುತ್ತವೆ. ಪ್ರಸ್ತುತ ಇದನ್ನು ಗರೊ ಬಾಪ್ಟಿಸ್ಟ್ ಚರ್ಚ್ ನಿರ್ವಹಿಸಿಕೊಂಡು ಬರುತ್ತಿದೆ. ಇದರ ಜೊತೆಗೆ ಈ ಕೆರೆಯಲ್ಲಿರುವ್ ಮೀನುಗಳ ಹರಾಜು ಪ್ರಕ್ರಿಯೆಯನ್ನು ಸಹ ಇವರೇ ನಿರ್ವಹಿಸುತ್ತಾರೆ.
ಶಿಲ್ಲಾಂಗ್‍ನಿಂದ ಖಾಸಗಿ ಕ್ಯಾಬ್‍ನ ಮೂಲಕ ಕಾಟ ಬೀಲ್‍ಗೆ ಆಗಮಿಸುವುದು ಉತ್ತಮ. ಇಲ್ಲವಾದಲ್ಲಿ ಗುವಹಾಟಿ - ಟುರ ಅಥವಾ ಶಿಲ್ಲಾಂಗ್- ಟುರ ಮಾರ್ಗವಾಗಿ ನಿಯಮಿತವಾಗಿ ಬಸ್ ಸಂಚಾರವಿದೆ ಅದನ್ನು ಬಳಸಿಕೊಂಡು ಸಹ ನಾವು ಇಲ್ಲಿಗೆ ತಲುಪಬಹುದು.


Click it and Unblock the Notifications