ಬೀಜಕ್ ಕಿ ಪಹಾಡಿ, ಇದೊಂದು ಗುಡ್ಡವಾಗಿದ್ದು ಇತಿಹಾಸದ ಸುವರ್ಣಮಯ ದಿನಗಳನ್ನು ನೆನಪಿಸುತ್ತದೆ. ಪ್ರವಾಸಿಗರು ಇಲ್ಲಿ ಕೆಲವು ಬೌದ್ಧ ಮಠಗಳ ಅವಶೇಷಗಳನ್ನು ಕಾಣಬಹುದಾಗಿದೆ. ಅಶೋಕ ಚಕ್ರವರ್ತಿಯ ಆಳ್ವಿಕೆಯ ಸುಮಾರು 900 ವರ್ಷಗಳ ತರುವಾಯ ಅಂದರೆ ಕ್ರಿ.ಶ 634 ರಲ್ಲಿ, ಹೂಯೆನ್ ತ್ಸಾಂಗ್ ವಿರಾಟ್ ನಗರಕ್ಕೆ ಭೇಟಿ ನೀಡಿದ ಸಮಯದಲ್ಲಿ, ಈ ತರಹದ ಎಂಟು ಮಠಗಳು ಚಾಲ್ತಿಯಲ್ಲಿದ್ದವು.ಮಠಗಳ ಕೆಳಗಿನ ಸ್ತರಗಳ ಕೇಂದ್ರ ಭಾಗವು ಗೋಲಾಕಾರವಾದ ಜಾಗವನ್ನು ಹೊಂದಿದ್ದು, ದೇವಸ್ಥಾನದ ಒಳಾಂಗಣವೆಂಬಂತೆ ಭಾಸವಾಗುತ್ತದೆ; ಇದೊಂದು ಪುರಾತನ ದೇವಸ್ಥಾನವಾಗಿದ್ದಿರಬಹುದು. ದೇವಸ್ಥಾನದ ಹೊರಗೋಡೆಗಳು, ಅಶೋಕ ಚಕ್ರವರ್ತಿಯ ಕಾಲದಲ್ಲಿ ಚಾಲ್ತಿಯಲ್ಲಿದ್ದ ಬ್ರಾಹ್ಮಿ ಲಿಪಿಯ ಕೆತ್ತನೆಗಳ ಶಾಸನಗಳನ್ನು ಹೊಂದಿವೆ. ಮಠಗಳ ಮೇಲಿನ ಸ್ತರವು ಕೆಳಸ್ತರದಿಂದ 30 ಅಡಿ ಎತ್ತರದಲ್ಲಿದೆ. ಪ್ರವಾಸಿಗರು ಇಲ್ಲಿ ಅಶೋಕ ಚಕ್ರವರ್ತಿಯ ಎರಡನೆ ಶಿಲಾಶಾಸನವನ್ನು ನೋಡಬಹುದಾಗಿದ್ದು, ಇದನ್ನು ಒಂದು ದೊಡ್ಡ ಗ್ರಾನೈಟ್ ಬಂಡೆಯ ಮೇಲೆ ಕೆತ್ತಲಾಗಿದೆ.


Click it and Unblock the Notifications