ಪ್ರಕಾಶಂ ಅಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಒಡ್ದು ಅಥವಾ ಅಣೆಕಟ್ಟು ಇಲ್ಲಿ ಒಂದು ವಿಹಂಗಮ ಕೆರೆ ಅಥವಾ ಸರೋವರ ನಿರ್ಮಾಣಕ್ಕೆ ಕಾರಣವಾಗಿದೆ. ಪ್ರಕಾಶಂ ಅಣೆಕಟ್ಟಿನಿಂದ ಕೆರೆಯ ಸುಂದರವಾದ ದೃಶ್ಯವನ್ನು ಸವಿಯಬಹುದು. ಇದರ ಉದ್ದ 1223.5 ಮೀಟರ್ ಇದ್ದು ಕೃಷ್ಣಾ ಜಿಲ್ಲೆಯನ್ನು ಗುಂಟೂರು ಜಿಲ್ಲೆಯೊಂದಿಗೆ ಸಂಪರ್ಕಿಸುತ್ತದೆ. ಪ್ರಕಾಶಂ ಅಣೆಕಟ್ಟನ್ನು 1852 ರಿಂದ 1855 ರ ನಡುವೆ ನಿರ್ಮಿಸಲಾಗಿದೆ. ಈ ಅಣೆಕಟ್ಟಿನಿಂದ ಮೂರು ಕಾಲುವೆಗಳು ನಗರದ ಮೂಲಕ ಚಲಿಸುತ್ತವೆ. ಇದರಿಂದಾಗಿ ವಿಜಯವಾಡ ನಗರವು ವೆನಿಸ್ ನ ಪ್ರತಿಕೃತಿಯಂತೆ ಗೋಚರಿಸುತ್ತದೆ!


Click it and Unblock the Notifications